ಚಾಮರಾಜನಗರ : ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಶ್ರೀನಿವಾಸ್ ಪ್ರಸಾದ್ ಒಬ್ಬರು. ಕರ್ನಾಟಕದ ರಾಜಕೀಯ ಇತಿಹಾಸಸ ಬಗ್ಗೆ ಮಾತನಾಡುವಾಗ ಶ್ರೀನಿವಾಸ್ ಪ್ರಸಾದ್ ಬಗ್ಗೆ ಮಾತನಾಡಲೇ ಬೇಕು. ಈಗ ಬಿಜೆಪಿ ಸಂಸತ್ ಸದಸ್ಯರಾಗಿರುವ ಅವರು ತಮ್ಮ ರಾಜಕೀಯ ಬದುಕಿನ ಹೆಚ್ಚಿನ ಸಮಯವನ್ನು ಕಳೆದಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಅವರು ಕಾಂಗ್ರೆಸ್ ಪಕ್ಷದಿಂದ 4 ಕ್ಕಿಂತ ಹೆಚ್ಚು ಬಾರಿ ಸಂಸತ್ ಸದಸ್ಯರಾಗಿದ್ದವರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿಯೂ ಕೆಲಸ ಮಾಡಿದವರು. ಆದರೆ ಯಾಕೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಜೊತೆಗಿನ ಸಂಬಂಧ ಕೆಟ್ತು ಹೋಯಿತು. ಅವರು ಬಿಜೆಪಿ ಸೇರಿ ಸಂಸತ್ ಸದಸ್ಯರಾದರು. ಈಗ ಅವರು ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.

ಇದಾದ ಮೇಲೆ ಎರಡು ದಿನಗಳ ಹಿಂದೆ ಕಾಂಗ್ರೆಸ್ ನಾಯಕರ ತಂಡ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇತಿ ಮಾಡಿತ್ತು. ಮೂಲಗಳ ಪ್ರಕಾರ ಶ್ರೀನಿಸಾಸ್ ಪ್ರಸಾದ್ ಅವರಿಗೆ ರಾಜಕೀಯ ಸಂಧ್ಯಾಕಾಲದಲ್ಲಿ ಬಿಜೆಪಿ ನಡೆ ಬಗ್ಗೆ ಅಸಮಧಾನ. ಹೀಗಾಗಿ ಕೇಳಿ ಬರುತ್ತಿರುವ ಪ್ರಶ್ನೆ ಬಿಜೆಪಿ ಪಕ್ಷದ ಗೆಲುವಿಗೆ ಕೈ ಜೋಡಿಸ್ತಾರ ಪ್ರಸಾದ್.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಫೋನ್ ಮಾಡಿ ಪ್ರಸಾದ್ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಗೆ ಬೆಂಬಲ ನೀಡಬಹುದು ಎಂಬ ವದಂತಿಗೆ ರೆಕ್ಕೆ ಪುಕ್ಕ ಬಂದಿದೆ. ಈ ನಡುವೆ ಶ್ರೀನಿವಾಸ್ ಪ್ರಸಾದ್ ಅವರ ಸಹೋದರಿಯ ಪುತ್ರ ಧೀರಜ್ ಪ್ರಸಾದ್ ಇಂದು ಕಾಂಗ್ರೆಸ್ ಪಕ್ಷವನ್ನು ಸೇರಿದರು.

ಹಳೇ ಮೈಸೂರು ಪ್ರದೇಶದಲ್ಲಿ ಚುನಾವಣಾ ಗೆಲುವಿನಲ್ಲಿ ದಲಿತ ಮತಗಳು ನಿರ್ಣಾಯಕ. ಪ್ರಸಾದ್ ಕಾಂಗ್ರೆಸ್ ಗೆ ಬೆಂಬಲ ನೀಡಿದರೆ ಕೈ ಶಕ್ತಿ ವೃದ್ದಿಸುವುದು ನಿಜ. ಹೀಗಾಗಿ ಈ ದಿಸೆಯಲ್ಲಿ ಯತ್ನ ನಡೆಯುತ್ತಿದೆ..

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ