ಕೆಲವೊಂದು ಸ್ವ ಹಿತಾಸಕ್ತಿ ಸಮೂಹಗಳು ನ್ಯಾಯಾಂಗ ನಿರ್ಣಯಗಳ ಮೇಲೆ ಪ್ರಭಾವ ಬೀರಲು ಒತ್ತಡ ತಂತ್ರವನ್ನು ಬಳಸುತ್ತಿವೆ ಎಂದು ಸುಮಾರು ೬೦೦ ಕ್ಕೂ ಹೆಚ್ಚು ವಕೀಲರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಪತ್ರ ಬರೆದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ನ್ಯಾಯಾಲಯ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಉಳಿಸಲು ಮುಂದಾಗಬೇಕು ಎಂದು ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.
ರಾಜಕೀಯ ನಾಯಕರಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಂತಹ ಸ್ವಹಿತಾಸಕ್ತ ಗುಂಪುಗಳು ಹೆಚ್ಚು ಸಕ್ರ‍ಿಯವಾಗಿವೆ ಎಂದು ಅವರು ಪತ್ರದಲ್ಲಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ,

ಭಾರತದ ಬೇರೆ ಬೇರೆ ಭಾಗಗಳ ವಕೀಲರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ, ಈ ವಕೀಲರಲ್ಲಿ ಹಿರಿಯ ಮತ್ತು ಖ್ಯಾತ ವಕೀಲರಾದ ಹರೀಶ್ ಸಾಳ್ವೆ, ಪಿಂಕಿ ಆನಂದ್ ಮೊದಲಾದವರೂ ಸೇರಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ