ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಈ ದಾಳಿಯಲ್ಲಿ ಆರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ದಾಳಿಕೋರರು ಚೀನಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.

ಸ್ಥಳೀಯ ಅಧಿಕಾರಿಗಳ ಪ್ರಕಾರ, ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಶಾಂಗ್ಲಾದಲ್ಲಿ ಆತ್ಮಾಹುತಿ ಬಾಂಬರ್ ನಡೆಸಿದ ಬಾಂಬ್ ಸ್ಫೋಟದಲ್ಲಿ ಆರು ಚೀನೀ ಪ್ರಜೆಗಳು ಅಸು ನೀಗಿದರು. ಮತ್ತೊಂದೆಡೆ ದಾಳಿಕೋರರು ನೌಕಾ ವಾಯುನೆಲೆಯ ಮೇಲೆ ದಾಳಿ ಮಾಡಿ್ದ್ದರು. ಇದರಲ್ಲಿ ಒಬ್ಬ ಯೋಧ ಸಹ ಸಾವನ್ನಪ್ಪಿದ್ದಾರೆ.

ಪಾಕಿಸ್ಥಾನ ಚೀನಾ ಎಕೊನೊಮಿಕ್ ಕಾರಿಡಾರ್ ಯೋಜನೆಯ ವಿರುದ್ಧ ಬಲೂಚಿಗಳು ಹೋರಾಟ ನಡೆಸುತ್ತಿದ್ದಾರೆ. ಬಲೂಚಿಸ್ಥಾನ ಪ್ರಾಂತದಲ್ಲಿರುವ ಸಂಪನ್ಮೂಲವನ್ನು ಪಾಕಿಸ್ಥಾನ ಲೂಟಿ ಹೊಡೆಯುತ್ತಿದೆ. ಆದರೆ ಬಲೂಚಿಸ್ಥಾನದಲ್ಲಿ ಯಾವ ರೀತಿಯ ಅಭಿವೃದ್ಧಿಯೂ ಆಗುತ್ತಿಲ್ಲ ಎಂದು ಸಶ ಸ್ತ ಹೋರಾಟವನ್ನು ಬಲೂಚಿಸ್ಥಾನ ಲಿಬರೇಷನ್ ಆರ್ಮಿ ನಡೆಸುತ್ತಲೇ ಬಂದಿದೆ. ಇದರಿಂದಾಗಿ ಗ್ವಾದರ್ ಬಂದರು ಸೇರಿದಂತೆ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಚೀನಿಯರು ಟಾರ್ಗೆಟ್ ಆಗುತ್ತಿದ್ದಾರೆ. ಇದರಿಂದ ಚೀನಾ ಕೂಡ ಯೋಜನೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಬಲೂಚಿಗರು ದಶಕಗಳಿಂದ ಪಾಕಿಸ್ತಾನ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಾರೆ.. ಆದರೆ ಇದರ ಹೊರತಾಗಿಯೂ, ಚೀನಾ ಇಲ್ಲಿ ಭಾರಿ ಹೂಡಿಕೆ ಮಾಡಿದೆ. ಆದರೂ ಯೋಜನೆ ಸಂಪೂರ್ಣಗೊಳ್ಳುವ ಬಗ್ಗೆ ಅನುಮಾನ ಉಂಟಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ