ಬೆಂಗಳೂರು : ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವವರು ಡಾ. ಮಂಜುನಾಥ್. ಈಗ ಅವರು ನೀಡಿದ ಹೇಳಿಕೆಯೊಂದು ಬಿಜೆಪಿ ಮೂಲ ನೀತಿಗೆ ವಿರುದ್ಧವಾಗಿದೆ. ಅವರು ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ಮಾತನಾಡಿದ್ದಾರೆ ನಿಜ. ಅದರೆ ಈ ಮಾತು ಬಿಜೆಪಿಯ ರಾಜಕಾರಣದ ಮೂಲ ಶಕ್ತಿಯನ್ನೇ ಅಲುಗಾಡಿಸುವಂತಿದೆ.

ಹಾಗೆ ಬಿಜೆಪಿ ಸಿದ್ದಾಂತಕ್ಕೂ ವಿರೋಧವಾಗಿದೆ.. ಈ ಹೇಳಿಕೆಗೆ ಬಿಜೆಪಿಯ ಪ್ರತಿಕ್ರಿಯೆ ಏನು ? ಬಿಜೆಪಿ ಬೆಂಬಲಕ್ಕೆ ನಿಂತಿರುವ ಮಾಧ್ಯಮಗಳು ಏನು ಹೇಳುತ್ತವೆ ? ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಾ. ಮಂಜುನಾಥ್ ಚುನಾವಣೆ ಜನ ಕೇಂದ್ರಿತವಾಗಿರಬೇಕೇ ಹೊರತೂ ಧರ್ಮ ಕೇಂದ್ರಿತವಾಗಿರಬಾರದು ಎಂದಿದ್ದಾರೆ. ಅವರಿಗೆ ಇಂದಿನ ಬಿಜೆಪಿ ರಾಜಕಾರಣದ ಅರಿವಿಲ್ಲವೆ ? ಅದು ಜನ ಕೇಂದ್ರಿತವೋ ಧರ್ಮ ಕೇಂದ್ರಿತವೀ ಎಂಬುದು ತಿಳಿಯದಷ್ಟು ಅವರು ದಡ್ಡರೆ ?

ಈ ಪ್ರಶ್ನೆಗಳಿಗೆ ಡಾ. ಮಂಜುನಾಥ್ ಅವರೆ ಉತ್ತರ ನೀಡಬೇಕು ?

ಈಗಿನ ಬಿಜೆಪಿ ರಾಜಕಾರಣ ಧರ್ಮ ಕೇಂದ್ರಿತ ಎಂಬುದು ಅವರಿಗೆ ಅರ್ಥವಾಗದಿದ್ದರೂ ಅಪಾಯ. ಅರ್ಥವಾಗಿ ಅದೇ ಪಕ್ಷದಿಂದ ಅವರು ಚುನಾವಣೆ ನಿಂತಿದ್ದರೂ ಅಪಾಯ.. ಈ ವಿಚಾರದಲ್ಲಿ ರಾಜ್ಯದ ಜನರಿಗೆ ಅವರು ವಿವರ ನೀಡಬೇಕಾಗುತ್ತದೆ.

ಹಾಗೆ ಬಿಜೆಪಿಯ ರಾಜ್ಯ ನಾಯಕರು ಮತ್ತು ಕೇಂದ್ರ ನಾಯಕರು ಮತದಾರರ ಮುಂದೆ ವಿವರ ನೀಡಬೇಕು. ಬಿಜೆಪಿ ರಾಜಕಾರಣ ಧರ್ಮ ಕೇಂದ್ರಿತ ರಾಜಕಾರಣ ಅಲ್ಲವೆ ?

ಈ ಸಂದರ್ಶನದಲ್ಲಿ ಡಾ. ಮಂಜುನಾಥ್ ಅವರು ಆಡಿದ ಮಾತುಗಳು;

ಚುನಾವಣೆ ಜನ ಕೇಂದ್ರಿತವಾಗಿರಬೇಕೆ ಹೊರತೂ ಧರ್ಮ ಕೇಂದ್ರಿತವಾಗಬಾರದು. ನನ್ನ ಬದುಕಿನಲ್ಲಿ ಎಂದಿಗೂ ಜಾತಿ ಮತ್ತು ಧರ್ಮದ್ ಆಧಾರದಲ್ಲಿ ಜನರನ್ನು ನೋಡಿದವನಲ್ಲ. ನನಗೆ ಗೊತ್ತಿರುವುದು ಎರಡೇ ಜಾತಿ, ಕೆಲಸ ಮಾಡುವವರು ಮತ್ತು ಮಾಡದವರು. ಅಭಿವೃದ್ಧಿಯ ದೂರದೃಷ್ಟಿ ಹಾಗೂ ನಾನು ಮಾಡಿದ ಕೆಲಸಗಳನ್ನು ಹೇಳಿಯೇ ಜನರ ಬಳಿ ಮತ ಕೇಳುವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ