ಬೆಂಗಳೂರು : ಬಳ್ಳಾರಿ ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ…ರಾಜ್ಯ ರಾಜಕಾರಣದಲ್ಲಿ ಹಲವು ಸ್ಥಿತ್ಯಂತರಗಳಿಗೆ ಕಾರಣರಾದವರು.. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜೈಲಿಗೂ ಹೋಗಿ ಬಂದವರು.. ಸಿದ್ದರಾಮಯ್ಯನವರ ಬಳ್ಳಾರಿ ನಡಿಗೆ ನಡೆದಿದ್ದು ಇವರ ವಿರುದ್ಧವೇ. ಆದರೆ ಕಾಲ ಅಂದರೆ ಹಾಗೆ.. ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿದವರು ರೆಡ್ಡಿ..ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ನೋಡಿ ಹೂ ಗುಚ್ಚ ನೀಡಿ ಬಂದರು..

ಸಿದ್ದರಾಮಯ್ಯ ಡಿ.ಕೆ. ಇಬ್ಬರೂ ಹಳೆಯದನ್ನು ಮರೆತರು..ಈ ಬೆಳವಣಿಗೆಯಲ್ಲಿ ಮಂಗನನ್ನಾಗಿ ಮಾಡಿದ್ದು ಈ ರಾಜ್ಯದ ಜನರನ್ನು. ಇದಾದ ತಕ್ಷಣ ಎಚ್ಚೆತ್ತುಕೊಂಡವರು ಕೇಂದ್ರ ಗೃಹ ಸಚಿವ ಅಮಿತ್ ಷಾ. ಅಯ್ಯೋ ಈ ರೆಡ್ಡಿ ಕಾಂಗ್ರೆಸ್ ಗೆ ಹೋಗಬಹುದು ಎಂಬ ಭಯ. ಕಳ್ಳರು ಸುಳ್ಳರು ಅಕ್ರಮ ದಂಧೆ ನಡೆಸುವವರು ನಮ್ಮ ಬಳಿಯೇ ಇರಲಿ ಎಂಬ ಆಸೆ.

ರೆಡ್ಡಿ ಮತ್ತು ಅಮಿತ್ ಷಾ ಮಾತುಕತೆ ನಡೆಸಿದರು. ರೆಡ್ಡಿ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ತೀರ್ಮಾನ ಕೈಗೊಂಡರು.. ಅರ್ಕಾವತಿಯಂತಹ ನದಿ ಸೇರಬೇಕಾದಲ್ಲಿ ಸೇರಿ ಬಿಟ್ಟಿತು.

ಇಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸೆರ‍್ಪಡೆ ಕಾರ್ಯಕ್ರಮ.. ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮೊದಲಾದವರು ಇದ್ದರು. ಅವರು ಕಾಂಗ್ರೆಸ್ ಸೇರಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮೊದಲಾದ ನಾಯಕರು ಇರುತ್ತಿದ್ದರು ಇಷ್ಟೇ ವ್ಯತ್ಯಾಸ.. ಇದೇ ಇವತ್ತಿನ ರಾಜಕೀಯ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ