ನವದೆಹಲಿ: ಆಯುರ್ವೇದ ಔಷಧದ ಉತ್ಪಾದನೆ ಮತ್ತು ಮರಾಟದ ಸಾಮ್ರಾಜ್ಯವನ್ನೇ ಕಟ್ಟಿಕೊಂಡವರು ಬಾಬಾ ರಾಮದೇವ್. ಅವರ ಪತಂಜಲಿ ಸಂಸ್ಥೆ ಕೋಟ್ಯಾಂತರ ರೂಪಾಯಿ ಒಹಿವಾಟು ನಡೆಸುತ್ತಿದೆ.
ಪತಂಜಲಿ ಸಂಸ್ಥೆ ಆಯುರ್ವೇದ ಔಷಧಗಳು ಮಾತ್ರವಲ್ಲ, ಇನ್ನೂ ಹಲವು ರೀತಿಯ ವಸ್ತುಗಳ ಉತ್ಪಾದನೆ ಮಾಡುತ್ತದೆ. ಅದು ತಯಾರಿಸುವ ತುಪ್ಪದ ಬಗ್ಗೆಯೂ ಈ ಹಿಂದೆ ದೂರು ಬಂದಿತ್ತು. ಅವರ ತುಪ್ಪ ಶುದ್ಧ ತುಪ್ಪವಲ್ಲ ಎಂದೂ ಹೇಳಲಾಗಿತ್ತು
ಬಾಬಾ ರಾಮದೇವ್ ಅವರ ಜೊತೆ ಔಷಧ ತಯಾರಿಕೆಯ ಮೂಲ ವ್ಯಕ್ತಿ ಆಚಾರ್ಯ ಬಾಲಕೃಷ್ಣ..ಇವರಿಬ್ಬರದೇ ಪತಂಜಲಿ ಸಾಮ್ರಾಜ್ಯ..

ಪತಂಜಲಿ ನೀಡುವ ಜಾಹಿರಾತುಗಳು ದಾರಿ ತಪ್ಪಿಸುವಂತಿವೆ ಎನ್ನುವುದು ದೂರು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಇಂಥಹ ಜಾಹೀರಾತುಗಳನ್ನು ನೀಡದಂತೆ ಸೂಚನೆ ನೀಡಿತ್ತು.. ಆದರೆ ಬಾಬಾ ರಾಮದೇವ್ ತಮ್ಮ ಕಾಯಕವನ್ನು ಮುಂದುವರಿಸಿದ್ದರು.
ಈಗ ಸರ್ವೋಚ್ಚ ನ್ಯಾಯಾಲಯ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ