ಬೆಂಗಳೂರು : ನಾನು ದುರ್ಬಲ ಮುಖ್ಯಮಂತ್ರಿ ಅಲ್ಲ ನೀವು ದುರ್ಬಲ ಪ್ರಧಾನ ಮಂತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.

ನಿನ್ನೆ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದರು. ಆದರೆ ಎಲ್ಲಿಯೂ ಸಿದ್ದರಾಮಯ್ಯನವರ ಹೆಸರನ್ನಾಗಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆವರ ಹೆಸರನ್ನಾಗಲಿ ಪ್ರಸ್ತಾಪಿಸದೇ ಮಾತಿನ ದಾಳಿ ನಡೆಸಿದ್ದರು. ಕರ್ನಾಟಕದಲ್ಲಿ ಶ್ಯಾಡೋ ಸಿಎಮ್ ಇದ್ದಾರೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನು ಕೆಣಕಿದ್ದರು. ಈ ಎಲ್ಲ ಟೀಕೆಗಳಿಗೆ ಮುಖ್ಯಮಂತ್ರಿ ಉತ್ತರ ನೀಡಿದ್ದಾರೆ.

ಪಕ್ಷದ ವಿರುದ್ಧ ಬಂಡೆದ್ದಿರುವ ಈಶ್ವರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದ ನೀವು ದುರ್ಬಲ ಪ್ರಧಾನಿ ಅಲ್ಲವೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಮ್ಮ ಶ್ಯಾಡೋ ಸಿಎಂ ಇಲ್ಲ, ಜ್ಯುಡೋ ಸಿಎಮ್ ಇಲ್ಲ. ಇರುವುದು ನಾನು ಮಾತ್ರ ಸ್ಟ್ರ‍ಾಂಗ್ ಸಿಎಂ ಎಂದಿರುವ ಸಿದ್ದರಾಮಯ್ಯ ನಿನ್ನ ಅಭಿಮಾನಿಗಳು ನಿಮಗೆ 56 ಇಂಚು ಎದೆ ಇರುವ ವಿಶ್ವಗುರು ಎನ್ನುತ್ತಾರೆ. ಆದರೆ ನೀವು ತುಂಬಾ ವೀಕ್ ಪಿಎಂ ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ