ನವದೆಹಲಿ: ಬಿಜೆಪಿ ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಇನ್ನಷ್ಟು ಕಗ್ಗಂಟಾಗಿದೆ. ಇಂದು ಎರಡೂ ಪಕ್ಷಗಳ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ..

ಆದರೆ ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಬಿದಿಗೆ ಇಳಿದಿದ್ದಾರೆ. ಪ್ರತಿಭಟನೆಗಳು ನಡೆಯುತ್ತಿವೆ..
ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಇರುವ ಕ್ಷೇತ್ರಗಳು ಹಲವು. ಜೊತೆಗೆ ಹಲವು ಸಚಿವರ ಮಕ್ಕಳಿಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಹಾಗೆ ಪಕ್ಷದಲ್ಲಿನ ಗುಂಪು, ಬಣ ರಾಜಕೀಯವನ್ನು ನಿಯಂತ್ರಿಸಬೇಕಾಗಿದೆ.

ಬಿಜೆಪಿ ಬೇರೆ ರೀತಿ ಸಮಸ್ಯೆಯನ್ನು ಎದುರಿಸುತ್ತಿದೆ. ಜೆಡಿಎಸ್ ಜೊತೆಗಿಮ ಮೈತ್ರಿಯಲ್ಲಿ ಈಗಾಗಲೇ ಅಪಸ್ವರ ಎದ್ದಿದೆ.. ಜೊತೆಗೆ ಮಂಡ್ಯ ಕ್ಷೇತ್ರ ತನಗೆ ಬೇಕೇ ಬೇಕು ಎಂದು ಸುಮಲತಾ ಪಟ್ಟು ಹಿಡಿದಿದ್ದಾರೆ. ಅವರನ್ನು ಸಮಾಧಾನ ಪಡಿಸುವ ಕೆಲಸದಲ್ಲಿ ಬಿಜೆಪಿ ವರಿಷ್ಟರು ನಿರತರಾಗಿದ್ದಾರೆ.

ಏನೇ ಇರಲಿ ಈ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಇಂದಿನ ಸಿಇಸಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ