ಬೆಂಗಳೂರು : ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೇವಲ ಎರಡು ಸ್ಥಾನಕ್ಕಾಗಿ ಇಷ್ಟೆಲ್ಲ ಹೊರಾಟ ಮಾಡಬೇಕಿತ್ತೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ ಎಂಬುದು ಅವರ ಆರೋಪ. ಜೆಡಿಎಸ್ ವರಿಷ್ಟ ಎಚ್. ಡಿ. ದೇವೇಗೌಡರು ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತನಾಡಿದರು. ಅವರಿಗೆ ಮೈತ್ರಿ ಧರ್ಮದ ಪಾಠ ಮಾಡಿದರು.. ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ತಪ್ಪು ಸಂದೇಶ ಹೋಗುತ್ತದೆ ಎಂದೂ ಅವರು ಯಡಿಯೂರಪ್ಪ ಅವರಿಗೆ ಎಚ್ಚರಿಕೆ ಮಾತನ್ನು ಹೇಳಿದರು.

ನಿನ್ನೆ ಸುದ್ದಿ ಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಯಾವ ಮುಚ್ಚು ಮರೆಯನ್ನು ಮಾಡಲಿಲ್ಲ. ಬಿಜೆಪಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಅಪ್ರತ್ಯಕ್ಷವಾಗಿ ಹೇಳಿದರು.

ಬಿಜೆಪಿ ಚುನಾವಣಾ ಪ್ರಚಾರ ಸಭೆಗಳನ್ನು ಮಾಡುತ್ತಿದೆ. ಆದರೆ ಈ ಬಗ್ಗೆ ನಮಗೆ ಹೇಳುತ್ತಿಲ್ಲ. ನಮ್ಮನ್ನು ಕರೆಯುತ್ತಿಲ್ಲ ಎಂಬ ಬೇಸರವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು. ಹಾಗೆ ನೋಡಿದರೆ ಈ ಭಾವನೆ ಕೇವಲ ಕುಮಾರಸ್ವಾಮಿ ಅವರ ಭಾವನೆ ಮಾತ್ರ ಆಗಿರಲಿಲ್ಲ. ನಿನ್ನೆ ನಡೆದ ಜೆಡಿಎಸ್ ಉನ್ನತ ಮಟ್ಟದ ಸಭೆಯಲ್ಲಿ ಹಲವು ನಾಯಕರು ಕಾರ್ಯಕರ್ತರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು..

ಹಾಸನ ಮತ್ತು ಮಂಡ್ಯ ನಮ್ಮ ಕ್ಷೇತ್ರ. ಇಲ್ಲಿ ಗೆಲ್ಲಲು ನಮಗೆ ಬಿಜೆಪಿ ಸಹಾಯದ ಅಗತ್ಯ ಇಲ್ಲ. ಆದರೆ ಬಿಜೆಪಿಗೆ ನಮ್ಮಿಂದ ರಾಜ್ಯದ ಎಲ್ಲ ಕ್ಶೇತ್ರಗಳಲ್ಲೂ ಸಹಾಯವಾಗುತ್ತದೆ. ಆದರೆ ಇದನ್ನು ಬಿಜೆಪಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಕೆಲವು ಕಾರ್ಯಕರ್ತರು ದೂರಿದರು.

ಈ ನಡುವೆ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ಬಿಜೆಪಿ ಇನ್ನೂ ಮನಸ್ಸು ಮಾಡಿಲ್ಲ. ಅಲ್ಲಿ ಬಿಜೆಪಿ ಸಂಸತ್ ಸದಸ್ಯ ಮುನಿಸ್ವಾಮಿ ಇದ್ದಾರೆ. ಅವರಿಗೆ ಮತ್ತೆ ಟಿಕೆಟ್ ನೀಡಲು ಬಿಜೆಪಿ ಒಲವನ್ನು ಹೊಂದಿದೆ. ಇದೇ ಮೂಲ ಸಮಸ್ಯೆ.ಹಾಗಿದ್ದರೆ ಈ ಮೈತ್ರಿಯ ಗತಿ ಏನು ? ಇದು ಸಾವಿರ ಡಾಲರ್ ಪ್ರಶ್ನೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You missed