ಮೆಘಾ ಇಂಜನಿಯರಿಂಗ್.. ಈ ಕಂಪೆನಿ ಈಗ ದೇಶದಲ್ಲಿ ಭಾರಿ ಪ್ರಚಾರದಲ್ಲಿದೆ.. ಇದಕ್ಕೆ ಕಾರಣ ಎಲೆಕ್ಟ್ರಲ್ ಬಾಂಡ್ !
ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದವರ ಪಟ್ಟಿಯಲ್ಲಿ ಈ ಕಂಪೆನಿಗೆ ಎರಡನೆಯ ಸ್ಥಾನ.
ಆಂದ್ರ ಮೂಲದ ಕಂಪೆನಿ ಇದು. ಎಂ ಈ ಐಎಲ್ ಎಂಬುದು ಈ ಕಂಪೆನಿಯ ಶಾರ್ಟ್ ಫಾರ್ಮ್ ಹೆಸರು.
1989ರಲ್ಲಿ ಆಂದ್ರದ ಪಮ್ಮಿ ರೆಡ್ಡಿ ಮತ್ತು ಪಿಚ್ಚಿ ರೆಡ್ಡಿ ಈ ಕಂಪೆನಿ ಪ್ರಾರಂಭಿಸಿದರು. ಆಗ ಹೂಡಿದ ಬಂಡವಾಳ ಕೇವಲ ಐದು ಲಕ್ಷ ರೂಪಾಯಿಗಳು. ಈ ಕಂಪೆನಿ ಪ್ರಾರಂಭದಲ್ಲಿ ಮುನ್ಸಿಫಾಲಿಟಿಗಳಿಗಾಗಿ ಪೈಪ್ ಗಳ ತಯಾರಿಕೆ ಮಾಡುತ್ತಿತ್ತು.

ಹೈದರಾಬಾದಿನ ಹೆಚ್ಚಿನ ಜನರಿಗೆ ಈ ಕಂಪೆನಿಯ ಬಗ್ಗೆ ಗೊತ್ತಿರಲೇ ಇಲ್ಲ. ಈಗ ಗೊತ್ತಾಗಿರುವುದು ಚುನಾವಣಾ ದೇಣಿಗೆಯ ಮೂಲಕ.. ಇತ್ತೀಚಿನ ವರ್ಷಗಳಲ್ಲಿ ಜೋಜಿಲಾ ಟ್ಯುನಲ್ ನಿರ್ಮಾಣ ಯೋಜನೆಯ ಗುತ್ತಿಗೆಯನ್ನು ಈ ಕಂಪೆನಿ ಪಡೆಯಿತು.. ಆಗ ಬಹಳಷ್ಟು ಜನ ಹುಬ್ಬೇರಿಸಿದ್ದರು. ದೇಶದ ಮೊದಲ ಬುಲೆಟ್ ಟ್ರೇನ್ ಯೋಜನೆಯ ಗುತ್ತಿಗೆ ಸಿಕ್ಕಿದ್ದು ಇದೇ ಕಂಪೆನಿಗೆ.. 2020 ರಿಂದ 2024 ರ ಅವಧಿಯಲ್ಲಿ ಈ ಕಂಪೆನಿ ಎಲೆಕ್ಟ್ರಲ್ ಬಾಂಡ್ ಖರೀದಿ ಮಾಡಿದ ಮೊತ್ತ ಎಷ್ಟು ಗೊತ್ತೆ ? ಬರೋಬರಿ 966 ಕೋಟಿ ರೂಪಾಯಿ…?
ಒಂದೆಡೆ ಪ್ರತಿಷ್ಟಿತ ಯೋಜನೆಗಳ ಗುತ್ತಿಗೆ ಇನ್ನೊಂದೆಡೆ ಚುನಾವಣಾ ದೇಣಿಗೆ… ಈ ಕರ್ಮಕಾಂಡ ಹೇಗಿದೆ ಗೊತ್ತಾಯಿತಲ್ಲ
.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ