ಮೋದಿ ಮತ್ತು ಅಮಿತ್ ಷಾ ಅವರ ಬಿಜೆಪಿ, ಅಡ್ವಾಣಿ, ವಾಜಪೇಯಿ ಅವರ ಬಿಜೆಪಿ ಅಲ್ಲ. ತತ್ವ ಸಿದ್ದಾಂತಕ್ಕಿಂತ ಮುಖ್ಯವಾಗಿ ಚುನಾವಣೆ ಗೆಲ್ಲುವುದೊಂದೇ ಗುರಿ. ಈ ಗುರಿಗಾಗಿ ಯಾವುದೇ ದಾರಿಯನ್ನು ಬೇಕಾದರೂ ಈಗಿನ ಬಿಜೆಪಿ ಹಿಡಿಯಬಲ್ಲದು. ಇದಕ್ಕೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳೇ ಸಾಕ್ಷಿ.

ದೇಶದಲ್ಲಿ ಕರ್ನಾಟದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರು ಒಬ್ಬೊಬ್ಬರಾಗಿ ಮೂಲೆಗುಂಪಾಗುತ್ತಿದ್ದಾರೆ. ಹಳೆಯ ನಾಯಕರನ್ನು ಹೊರದಬ್ಬಲಾಗುತ್ತಿದೆ ಇಲ್ಲವೇ ಅವರಾಗಿಯೇ ಹೊರಕ್ಕೆ ಹೋಗುವ ವಾತಾವರಣ ಸೃಷ್ಟಿಸಲಾಗುತ್ತಿದೆ. ಈ ಸಾಲಿನ ಹೊಸ ಸೇರ್ಪಡೆ ಡಿ. ವಿ. ಸದಾನಂದ ಗೌಡ.. ಸದಾ ನಗು ಮುಖದಲ್ಲೇ ಇರುವ ಸದಾನಂದ ಗೌಡರ ಮುಖದ ಮೇಲಿನ ನಗೆ ಈಗ ಮಾಸುತ್ತಿದೆ. ಅವರ ಈ ಸ್ಥಿತಿಗೆ ಕಾರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ..

ಸದಾನಂದ ಗೌಡರು ಈಗ ಬಿಜೆಪಿಯಿಂದ ಒಂದು ಹೆಜ್ಜೆ ಹೊರಕ್ಕೆ ಇಟ್ಟಿದ್ದಾರೆ. ನಾಳೆ ಮಹತ್ವದ ಪತ್ರಿಕಾಗೋಷ್ಟಿ ಕರೆದಿರುವ ಅವರು ತಮ್ಮ ನೋವು ಅಸಹಾಯಕತೆಯನ್ನು ಬಹಿರಂಗಪಡಿಸಲಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷದ ಜೊತೆ ಕೂಡ ಸದಾನಂದ ಗೌಡ ಮಾತನಾಡುತ್ತಿರುವ ವರದಿಗಳು ಬರುತ್ತಿವೆ. ಹಾಗೆ ಈಗ ಎರಡು ದಿನಗಳ ಹಿಂದೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಗೌಡರು ಕಾಂಗ್ರೆಸ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಜಾತಿ ಸಮುದಾಯಗಳ ನಾಯಕರಿಗೆ ಗೌರವ ನೀಡಲಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ, ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸದಾನಂದ ಗೌಡರು ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಸದಾನಂದ ಗೌಡರು ಕಾಂಗ್ರೆಸ್ ಗೆ ಸೇರಬಹುದು ಎಂಬ ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡಿದೆ.

ನಾಳೆ ಸದಾನಂದ ಗೌಡರು ಕರೆದಿರುವ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟನೆ ದೊರಕಬಹುದು. ಕಾಂಗ್ರೆಸ್ ಗೆ ಸೇರುವ ಕುರಿತು ಅವರು ಸ್ಪಷ್ಟನೆ ದೊರಕಬಹುದು. ಕಾಂಗ್ರೆಸ್ ಪಕ್ಷಕ್ಕೂ ಕೂಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸರಿಯಾದ ಅಭ್ಯರ್ಥಿಗಳಿಲ್ಲ. ಸದಾನಂದ ಗೌಡರು ಕಾಂಗ್ರೆಸ್ ಸೇರುವ ತೀರ್ಮಾನ ಕೈಗೊಂಡರೆ ಅವರಿಗೆ ಇದೇ ಕ್ಷೇತ್ರದಿಂದ ಟಿಕೆಟ್ ಕೂಡ ದೊರಕಬಹುದು. ಅಂತಹ ಸ್ಥಿತಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ಕುತೂಹಲದ ಕದನಕ್ಕೆ ಕಾರಣವಾಗಬಹುದು. ದಕ್ಷಿಣ ಕನ್ನಡದ ಇಬ್ಬರ ನಾಯಕರ ನಡುವಿನ ಸ್ಪರ್ಧೆಗೆ ಕಾರಣವಾಗಬಹುದು.. ಇಬ್ಬರು ಬಿಜೆಪಿ ನಾಯಕರ ನಡುವಿನ ಸ್ಪರ್ಧೆ,, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸದಾನಂದ ಗೌಡ..

ಈ ಎಲ್ಲ ಊಹಾಪೋಹಗಳಿಗೆ ನಾಳೆ ತೆರೆ ಬೀಳಬಹುದು..ಸದಾನಂದ ಗೌಡರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಪ್ರಕಟಿಸಬಹುದು.. ರಾಜಕೀಯ ಅಂದರೆ ಹಾಗೆ ಅಲ್ಲಿ ಎಲ್ಲಕ್ಕಿಂತ ಅಧಿಕಾರವೇ ಮುಖ್ಯ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ