ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ, ಮೋದಿ ಅವರದ್ದು ಹಫ್ಸಾ ವಸೂಲಿ ಸರ್ಕಾರ ಎಂದೂ ಕಾಂಗ್ರೆಸ್ ಆರೋಪಿಸಿದೆ.

ಸಿಬಿಐ, ಇಡಿ ಅಥವಾ ಐಟಿಯಿಂದ ತನಿಖೆ ಎದುರಿಸಿದ ಒಟ್ಟು 21 ಸಂಸ್ಥೆಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನ ಜೈರಾಮ್ ರಮೇಶ್ ಆರೋಪಿಸಿದ್ದಾರೆ..

ಪ್ರತಿ ದಿನ ಕಳೆದಂತೆ ಚುನಾವಣಾ ಬಾಂಡ್ ಹಗರಣದ ನೈಜ ಆಳದ ಬಗ್ಗೆ ಹೆಚ್ಚಿನ ಉದಾಹರಣೆಗಳು ಹೊರಹೊಮ್ಮುತ್ತಿವೆ. ‘ಪ್ರಧಾನ ಮಂತ್ರಿ ಹಫ್ತಾ ವಸೂಲಿ ಯೋಜನೆ ಕುರಿತು ಹೆಚ್ಚಿನ ಗಮನ ನೀಡುತ್ತೇವೆ. ಇದು ಚುನಾವಣಾ ಬಾಂಡ್ ಹಗರಣದಲ್ಲಿ ಭ್ರಷ್ಟಾಚಾರದ ನಾಲ್ಕು ಚಾನಲ್‌ಗಳಲ್ಲಿ ಎರಡನೆಯದು: 1ಚಂದಾ ದೋ, ದಂಧಾ ಲೋ 2.ಹಫ್ತಾ ವಸೂಲಿ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ