ಮಾಜಿ ಪತ್ರಕರ್ತ ಹಿಂದುತ್ವವಾದಿ ಮೋದಿ ಪರಮ ಭಕ್ತ ಪ್ರತಾಪ ಸಿಂಹ ಈಗೇನು ಮಾಡುತ್ತಿದ್ದಾರೆ ?
ಅವರಿಗೆ ಟಿಕೆಟ್ ತಪ್ಪಿದ ಮೇಲೆ ಅವರು ಆಡುತ್ತಿರುವ ಮಾತುಗಳು ಅವರ ದುಃಖ ಅಸಹಾಯಕತೆ ರಾಜಕೀಯ ಭವಿಷ್ಯದ ಆತಂಕ ಎಲ್ಲವನ್ನು ಬಹಿರಂಗಪಡಿಸಿವೆ.

ನಿಜ ಪ್ರತಾಪ ಸಿಂಹ ಈಗ ದುಃಖತಪ್ತ ಜೀವಿ. ಮೈಸೂರಿನಲ್ಲಿರುವ ಗುಂಬಜ್ ಗಳು, ಟಿಪ್ಪೂ ಸುಲ್ತಾನ್ ಎಲ್ಲವೂ ಅವರಿಗೆ ದುಸ್ವಪ್ನವಾಗಿ ಕಾಡುತ್ತಿವೆ, ಮೈಸೂರು ಬೆಂಗಳೂರಿನ ಟಿಪ್ಪೂ ಎಕ್ಸಪ್ರೆಸ್ ಗೆ ಒಡೆಯರ್ ಹೆಸರಿಟ್ಟು ಸಂತೋಷ ಪಟ್ಟಿದ್ದ ಅವರಿಗೆ ಒಡೆಯರ್ ಅವರೇ ರಾಜಕಿಯ ಬದುಕಿಗೆ ಚಪ್ಪಡಿ ಕಲ್ಲು ಎಳೆದು ಬಿಟ್ಟಿದ್ದಾರೆ. ಹೀಗಾಗಿ ಯದುವೀರರ ಮೇಲೆ ಸತತ ದಾಳಿ ನಡೆಸುತ್ತಿದ್ದಾರೆ ಪ್ರತಾಪ ಸಿಂಹ.
ಈ ತನ್ನ ದುಸ್ಥಿತಿಯ ಬಗ್ಗೆ ತಮ್ಮ ಆಪ್ತರ ಜೊತೆ ಅವರು ಅಳಲು ತೋಡಿಕೊಂಡಿದ್ದಾರೆ. ಮುಂದಿನ ದಾರಿ ಯಾವುದಯ್ಯ ಎಂದು ಅಳಲು ಪ್ರಾರಂಭಿಸಿದ್ದಾರೆ. ಜೊತೆಗೆ ತಮ್ಮ ಮುಂದಿನ ದಾರಿಯ ಬಗ್ಗೆ ಅವರು ಮುಕ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅವರಿಗೆ ಈಗಿರುವ ಒಂದೇ ದಾರಿ ಎಂದರೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರುವುದು ಮಾತ್ರ… ಈ ಬಗ್ಗೆಯೂ ಅವರು ಚಿಂತನೆ ನಡೆಸುತ್ತಿದ್ದಾರೆ ಎಂಬುದು ಸ್ಪೋಟಕ ವರದಿ.
ಪ್ರತಾಪ್ ಸಿಂಹ ಅವರಿಗೆ ಪತ್ರಿಕೋದ್ಯಮದಲ್ಲಿ ಗುರು ಸಮಾನರಾಗಿರುವ ಪತ್ರಕರ್ತರೊಬ್ಬರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರಂತೆ. ಈ ಬಲಪಂಥೀಯ ಪತ್ರ ಕರ್ತರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಆಪ್ತರು.. ಸಿದ್ದರಾಮಯ್ಯನವರ ಮನೆಯಲ್ಲಿ ಕಚೇರಿಯಲ್ಲಿ ಈ ಪತ್ರಕರ್ತರಿಗೆ ಸದಾ ರೆಡ್ ಕಾರ್ಪೆಟ್ ಸ್ವಾಗತ.. ಈ ಬಗ್ಗೆ ಹಲವು ಚಿಂತಕರು ಪಕ್ಷದ ನಾಯಕರು ಸಿದ್ದರಾಮಯ್ಯನವರ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದೂ ಉಂಟು.. ಆದರೆ ಇದರಿಂದ ಪತ್ರಕರ್ತರು ಮತ್ತು ಸಿದ್ದರಾಮಯ್ಯನವರ ಸಂಬಂಧವೇನೂ ಹಾಳಾಗಿಲ್ಲ>
ಈಗ ಪ್ರತಾಪ ಸಿಂಹ ಅವರ ಮುಂದಿನ ರಾಜಕೀಯದ ದಾರಿಗೆ ದೀಪ ಹಿಡಿಯಲು ಮುಂದಾಗಿರುವ ಈ ಪತ್ರಕರ್ತರು ಸಿದ್ದರಾಮಯ್ಯ ಮತ್ತು ಪ್ರತಾಪ ಸಿಂಹ ನಡುವೆ ಮಧ್ಯಸ್ಥಿಕೆ ಒಹಿಸುತ್ತಿದ್ದಾರಂತೆ…
ಎಲ್ಲವೂ ಸಲೀಸಾಗಿ ನಡೆದರೆ ಪ್ರತಾಪ ಸಿಂಹ ತಲೆಯ ಮೇಲಿನ ಗುಂಬಜ್ ಇಳಿಸಿ ಚಡ್ಡಿ ಕಳ಼ಚಬಹುದು…ಟಿಪ್ಪೂ ದೇಶ ಭಕ್ತಿಯ ಬಗ್ಗೆಯೂ ಭಾಷಣ ಹೊಡೆಯಬಹುದು,,
ಅದಕ್ಕೆ ಅಲ್ಲವೇ ರಾಜಕೀಯ ಎಂದರೆ ಲಾಸ್ಟ್ ರೆಸಾರ್ಟ್ ಆಫ್ ಸ್ಕೌಂಡ್ರಲ್ಸ್ ಎಂದು ಹೇಳುವುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ