ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಗೃಹ ಸಚಿವ ಅಮಿತ್ ಷಾ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಅವರು ತಮ್ಮ ಪರಿವಾರದ ಜೊತೆ ಅಮಿತ್ ಷಾ ಅವರನ್ನು ಭೇಟಿ ಮಾಡುವುದು ಸಾಮಾನ್ಯವಾಗಿದೆ. ಅವರು ಅಮಿತ್ ಷಾ ಅವರನ್ನು ನೋಡುವಾಗಲೆಲ್ಲ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆದೊಯ್ಯುತ್ತಿದ್ದರು.

ಇವತ್ತು ಅಮಿತ್ ಷಾ ಅವರನ್ನು ನೋಡುವಾಗ ಮಗನ ಜೊತೆ ಸಹೋದರಿ ಮತ್ತು ಭಾವನನ್ನು ಕರೆದೊಯ್ದಿದ್ದರು.. ಭಾವ ಡಾ. ಮಂಜುನಾಥ್ ಮತ್ತು ಸಹೋದರಿ ಅನುಸೂಯ ಕೂಡ ಜೊತೆಗಿದ್ದರು. ಇದೊಂದು ಅಪರೂಪದ ಪರಿವಾರವಾದ. ಪಾಪ ಸಹೋದರ ರೇವಣ್ಣ ಮತ್ತು ಅವರ ಕುಟುಂಬವನ್ನು ಮಾತ್ರ ಎಂದಿನಂತೆ ದೂರವಿಡಲಾಗಿತ್ತು.