15 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ – ಜಪಾನ್

ದೇಶದ ಪ್ರಪ್ರಥಮ ಬುಲೆಟ್​ ಟ್ರೈನ್​ ಯೋಜನೆಗೆ ಚಾಲನೆ ದೊರೆತ ಬೆನ್ನಲ್ಲೆ ಗುಜರಾತ್​ನ ಗಾಂಧಿನಗರಲ್ಲಿ ಭಾರತ-ಜಪಾನ್​ 12 ನೇ ವಾರ್ಷಿಕ ಸಮ್ಮೇಳನ ನಡೆಯಿತು..ಈ ಸಮ್ಮೇಳನದಲ್ಲಿ ಪ್ರಧಾನಿ ಮೋದಿ,ಜಪಾನ್​ ಪ್ರಧಾನಿ ಶಿಂಜೋ ಅಬೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ರು..ಎರಡೂ ದೇಶಗಳು ಪರಮಾಣು ಒಪ್ಪಂದ ಸೇರಿದಂತೆ 15 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದವು..ಭಾರತ ಹಾಗೂ ಜಪಾನ್​ ಎರಡೂ ದೇಶಗಳೂ ಭಾರತ, ಜಪಾನ್​ ಪೋಸ್ಟ್​ ಕೂಲ್​ ಬಾಕ್ಸ್​ ಸರ್ವಿಸ್​ ಎಂಬ ಹೊಸ ಯೋಜನೆ ಪ್ರಾರಂಭಿಸಿದ್ದು,ಭಾರತದಲ್ಲಿರುವ ಜಪಾನ್​ ವಾಸಿಗಳು ತಮಗೆ ಇಷ್ಟವಾದ ಆಹಾರ ಆರ್ಡರ್​ ಮಾಡಬಹುದು..ಇನ್ನು ಬುಲೆಟ್​ ಟ್ರೈನ್​ ಯೋಜನೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುತ್ತೆ ಎಂದು ಹೇಳಿದ್ದಾರೆ..ಈ ವರ್ಷ ಜಪಾನ್​ ನಮ್ಮ ದೇಶಕ್ಕೆ 4.7 ಬಿಲಿಯನ್​ ಬಂಡವಾಳ ಹೂಡಿಕೆ ಮಾಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಶೇ.80 ರಷ್ಟು ಹೆಚ್ಚು ಬಂಡವಾಳ ಹೂಡಿಕೆ ಮಾಡಿದೆ ಅಂತ ಮೋದಿ ಶ್ಲಾಘಿಸಿದ್ದಾರೆ..ಇದೇ ವೇಳೆ ಭಾರತದ ಮೇಕ್​ ಇನ್​ ಇಂಡಿಯಾಗೆ ನಾವು ಪ್ರೋತ್ಸಾಹಿಸುವುದಾಗಿ ಜಪಾನ್​ ಪ್ರಧಾನಿ ಶಿಂಜೋ ಅಬೆ ಹೇಳಿದ್ದಾರೆ.

0

Leave a Reply

Your email address will not be published. Required fields are marked *