ಸಿಬಿಎಸ್​​ಇ ಫಲಿತಾಂಶ: ಶೇಕಡಾವಾರು ಪ್ರಮಾಣದಲ್ಲಿ ಇಳಿಕೆ

ನವದೆಹಲಿ: 2017ರ 10ನೇ ತರಗತಿ ಸಿಬಿಎಸ್​​ಇ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು ಶೇಕಡಾವಾರು ಫಲಿತಾಂಶದಲ್ಲಿ ಇಳಿಕೆಯಾಗಿದೆ. ಕೇರಳದ ತ್ರಿವೇಂಡ್ರಂನಲ್ಲಿ ಶೇ. 99.85, ತಮಿಳುನಾಡಿನ ಚೆನ್ನೈನಲ್ಲಿ ಶೇ. 99.62, ಒಡಿಶಾದ ಭುವನೇಶ್ವರದಲ್ಲಿ 92.15, ಪಂಜಾಬ್​​ನ ಚಂಡೀಗಢದಲ್ಲಿ 94.34, ಅಸ್ಸಾಂನ ಗುವಾಹಟಿಯಲ್ಲಿ ಶೇ. 65.53. ದೆಹಲಿಯಲ್ಲಿ ಶೇ. 78.09, ಬಿಹಾರದ ಪಾಟ್ನಾದಲ್ಲಿ ಶೇ. 95.50, ಉತ್ತರಪ್ರದೇಶದ ಅಲಹಾಬಾದ್​​ನಲ್ಲಿ ಶೇ. 98.23, ಉತ್ತರಾಖಂಡ್​​ನ ಡೆಹ್ರಾಡೂನ್​ನಲ್ಲಿ ಶೇ. 97.27, ರಾಜಸ್ಥಾನದ ಅಜ್ಮೀರ್​​ನಲ್ಲಿ ಶೇ. 93.30ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಬಿಎಸ್​​ಇ 12ನೇ ತರಗತಿಯ ಫಲಿತಾಂಶ ಕಳೆದ ಭಾನುವಾರ ಬಿಡುಗಡೆಯಾಗಿತ್ತು. ಶೇ. 82.02ಕ್ಕೆ ದ್ವಿತೀಯ ಪಿಯು ಫಲಿತಾಂಶ ಕೂಡ ಕುಸಿದಿತ್ತು.

0

Leave a Reply

Your email address will not be published. Required fields are marked *