ತಮಿಳುನಾಡಿನ ಒಂದೇ ಕುಟುಂಬದ 10 ಜನ ಸಾವು

ತ್ರಿಚ್ಚಿ: ತಮಿಳುನಾಡಿನ ತ್ರಿಚ್ಚಿಯಲ್ಲಿ ಬೋರ್​ವೆಲ್ ಲಾರಿ ಮತ್ತು ಪ್ರವಾಸಿಗರ ವ್ಯಾನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ 10 ಜನ ಬಲಿಯಾದ ದುರ್ಘಟನೆ ವರದಿಯಾಗಿದೆ. ಮೂರು ಬಾಲಕಿಯರು, ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 10 ಜನ ಸಾವಿಗೀಡಾಗಿದ್ದಾರೆ. ಬಲಿಯಾದವರನ್ನು ನಂದೀಶ್, ಜಯಶಕ್ತ್ಯಾ, ಸಂದಿರ ಕುಮಾರ್, ಸುರಾನಾ, ಈಶ್ವರನ್, ನೀಲಾ, ವೈದ್ಯಲಿಂಗಂ, ನಟರಾಜನ್, ಪುಷ್ಪಕಲಾ ಮತ್ತು ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ತಮಿಳುನಾಡಿನ ತ್ರಿಚ್ಚಿಯಲ್ಲಿ ಕಳೆದ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬಕ್ಕೆ ಸೇರಿದ 10 ಜನ ಸ್ಥಳದಲ್ಲೇ ಬಲಿಯಾದ ದುರ್ಘಟನೆ ನಡೆದಿದೆ. ಕುಟುಂಬ ಸಮೇತ 15 ಜನ ತಿರುಪತಿಗೆ ಹೊರಟಿದ್ದ ವೇಳೆ ಕೊಳವೆ ಬಾವಿ ಕೊರೆಯುವ ಲಾರಿ ಮತ್ತು ಪ್ರವಾಸಿಗರ ವ್ಯಾನ್ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ವಾಹನ ಕಳೆದ ರಾತ್ರಿ ಸುಮಾರು 11.30 ಗಂಟೆಗೆ, ತರುರಂಗರಿಚಿ ಹತ್ತಿರ ಬಂದಿತ್ತು. ಮಧುರೈ-ತಿರುಚ್ಚಿ ರಸ್ತೆಯಿಂದ ಬಳ್ಳಾರಿ ಕಡೆಗೆ ಮೂರೂಣಿಮಲೈ ಸರ್ವಿಸ್ ರಸ್ತೆಗೆ ಹೊರಳುವ ಸಮಯದಲ್ಲಿ ಇದ್ದಕ್ಕಿದ್ದಂತೆ ನುಗ್ಗಿದ ಕೊಳವೆ ಬಾವಿ ಕೊರೆಯುವ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ, 5 ಪುರುಷರು, 3 ಮಹಿಳೆಯರು ಮತ್ತು 2 ಮಕ್ಕಳು ಸೇರಿ ಒಟ್ಟು 10 ಜನ ಬಲಿಯಾಗಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ಭದ್ರತಾ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾದರು. ಅಪಘಾತಕ್ಕೆ ಸಿಲುಕಿದ ವ್ಯಾನ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಜೀವಂತವಾಗಿ ಉಳಿದವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

0

Leave a Reply

Your email address will not be published. Required fields are marked *