ಮುಜಾಫರ್​​ನಗರದಲ್ಲಿ ಘರ್ಷಣೆ: ಒಬ್ಬ ವ್ಯಕ್ತಿ ಬಲಿ, 6 ಜನರಿಗೆ ಗಾಯ

ಮುಜಾಫರ್​ ನಗರ: ಉತ್ತರಪ್ರದೇಶದ ಮುಜಾಫರ್​ ನಗರದ ನಾಸಿರ್​​ಪುರದಲ್ಲಿ ನಿನ್ನೆ ಕ್ಷುಲ್ಲಕ ಕಾರಣಕ್ಕೆ ನಡೆದ ಕೋಮು ಗಲಭೆಗೆ ಒಬ್ಬ ವ್ಯಕ್ತಿ ಬಲಿಯಾಗಿ, ಆರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಘಟನೆ ಸಂಬಂಧ 20 ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಸ್​​ಪಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಚರಂಡಿ ನೀರು ಉಕ್ಕಿ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಪರಸ್ಪರರ ಮೇಲೆ ಆರೋಪಿಸಿದ ಎರಡು ಕೋಮುಗಳಿಗೆ ಸೇರಿದ ಜನ, ಪರಸ್ಪರರ ಮೇಲೆ ಬಂದೂಕು ಮತ್ತು ಕಲ್ಲಿನ ದಾಳಿ ನಡೆಸಿದ್ದರು. ಮೃತ ವ್ಯಕ್ತಿಯನ್ನು ಆಕಾಶ್ (22) ಎಂದು ಗುರುತಿಸಲಾಗಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರ, ತನ್ನ ಭರವಸೆ ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಪಕ್ಷಗಳು ದೂರಿವೆ.

0

Leave a Reply

Your email address will not be published. Required fields are marked *