ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಅರವತ್ತರ ವಿಶ್ವಸುಂದರಿ ! ದಾಖಲೆ ಬರದೇ ಬಿಟ್ಟಳಲ್ಲ…!!
ವಯಸ್ಸಿಗೂ ಸೌಂದರ್ಯಕ್ಕೂ ಸಂಬಂಧ ಇದೆಯಾ ? ನೋ ನಾಟ್ ಎಟ್ ಆಲ್.. ಮಹಾತ್ಮಾ ಗಾಂಧಿ ವಯಸ್ಸಾದ ಮೇಲೆ ಹೆಚ್ಚು ಸುಂದರವಾಗಿ ಕಾಣುತ್ತಿದ್ದರು.
ಅವರ ಬಾಗಿದ ಬೆನ್ನು ತುಂಡು ಬಟ್ಟೆ. ಕಣ್ನಿಗೊಂದು ಕನ್ನಡಕ. ವೇಗವಾಗಿ ನಡೆಯುವ ನಡೆ. ಆ ಸೌಂದರ್ಯವೇ ಬೇರೆ/
ಈಗ ಇಲ್ಲಿ ಹೇಳುತ್ತಿರುವುದು ಸ್ತ್ರೀ ಸೌಂದರ್ಯದ ಬಗ್ಗೆ. ಈಕೆಗೆ ೬೦ ವರ್ಷ ವಯಸ್ಸು. ಈಕೆಯ ಚಿತ್ರವನ್ನು ಇನ್ನೊಮ್ಮೆ ನೋಡಿ ಬಿಡಿ. ಈಕೆಗೆ ೬೦ ವರ್ಷ ವಯಸ್ಸಾಗಿದೆ ಎಂದು ಅನ್ನಿಸುವುದೇ ಇಲ್ಲ. ಆಕೆ ತನ್ನ ಸೌಂದರ್ಯವನ್ನು ಹಾಗೆ ಜತನದಿಂದ ಕಾಪಾಡಿಕೊಂಡು ಬಂದಿದ್ದಾಳೆ.
ಹೀಗೆ ದೈಹಿಕ ಸೌಂದರ್ಯವನ್ನು ಕಾಪಾಡಿಕೊಂಡು ಬಂದವರು ಇರಬಹುದು. ಆದರೆ ಈಕೆಯ ವಿಶೇಷ ಇನ್ನೂ ಇದೆ..
ಈಕೆಯ ಹೆಸರು ಅಲೇಜೇಂಡ್ರಾ ಮಾರಿಸಾ ರೋಡ್ರಿಗೇಸ್..ಈಗ ಈಕೆ ವಿಶ್ವ ಸುಂದರಿ..! ೬೦ ವರ್ಷದ ವಿಶ್ವ ಸುಂದರಿ. ಇದು ದಾಖಲೆ. ಇದುವರೆಗೆ ಇಷ್ಟು ವಯಸ್ಸಾದವರು ವಿಶ್ವಸುಂದರಿ ಆಗಿರಲಿಲ್ಲ.
ಕಳೆದ ಬುಧವಾರ ಬ್ಯೂರಸ್ ಐರಸ್ ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಈಕೆ ವಿಶ್ವ ಸುಂದರಿಯಾಗಿ ಆಯ್ಕೆಯಾದಳು. ಸಮಸ್ಯೆ ಎಂದರೆ ಈಕೆಯನ್ನು ಅಜ್ಜಿ ಅನ್ನುವ ಹಾಗಿಲ್ಲ, ಮಧ್ಯ ವಯಸ್ಸಿನ ಸುಂದರಿ ಎಂದು ಹೇಳೋಣವೆ ? ಇಲ್ಲ ಇವಳಿಗೆ ಮಧ್ಯ ವಯಸ್ಸೂ ದಾಟಿ ಹೋಗಿದೆ. ಒಟ್ಟಿನಲ್ಲಿ ಇನ್ನಷ್ಟು ಸೌಂದರ್ಯ ಸ್ಪರ್ಧೆಯಲ್ಲಿ ಈಕೆ ಪಾಲ್ಗೊಳ್ಳುತ್ತಿದ್ದಾಳೆ,’
ಹದಿನೆಂಟು ಇಪ್ಪತ್ತು ವರ್ಷ ವಯಸ್ಸಿನಲ್ಲಿ ಸೌಂಡರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮಾಮೂಲು. ಆದರೆ ೬ಒ ನೆಯ ವಯಸ್ಸಿನಲ್ಲಿ ಈ ಸ್ಪರ್ಧೆಗೆ ನಾನು ಪಾಲ್ಗೊಳ್ಳುತ್ತಿರುವುದೇ ಸಂತಸದ ವಿಚಾರ ಎನ್ನುತ್ತಿದ್ದಾಳೆ ಈ ಸುಂದರಿ.
