ಗದಗ ಉತ್ಸವ ಮ್ಯಾರಥಾನ್​​ಗೆ ಯುವಕರ ನೀರಸ ಪ್ರತಿಕ್ರಿಯೆ

ಗದಗ: ಸಂಗೀತದ ನಾಡಿನಲ್ಲಿ ಇಂದಿನಿಂದ 3 ದಿನಗಳ ಕಾಲ ನಗರದಲ್ಲಿ ಗದಗ ಉತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಮ್ಯಾರಾಥಾನ್ ಓಟ ಆಯೋಜಿಸಲಾಗಿತ್ತು. ಇಂದು ಮುಂಜಾನೆ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿ.ಪಂ.ಅಧ್ಯಕ್ಷ ವಾಸಣ್ಣ ಕುರಡಗಿ ಚಾಲನೆ ನೀಡಿದರು. ಇಲ್ಲಿನಿಂದ ಪ್ರಾರಂಭವಾದ ಮ್ಯಾರಥಾನ್ ಓಟ, ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮುಳಗುಂದ ನಾಕಾ ಸರ್ಕಲ್ ತಲುಪಿತು. ಆದರೆ ಮ್ಯಾರಥಾನ್ ಓಟಕ್ಕೆ ಯುವಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅದ್ಧೂರಿ ಉತ್ಸವದ ಮ್ಯಾರಥಾನ್ ಓಟದಲ್ಲಿ ಕೇವಲ ೪೦ ಬಾಲಕರು ಮಾತ್ರ ಭಾಗಿಯಾಗಿದ್ದರು. ಮ್ಯಾರಥಾನ್ ಓಟ ಅವ್ಯವಸ್ಥೆಯ ಆಗರವಾಗಿತ್ತು. ಟ್ರಾಫಿಕ್ ಕ್ಲಿಯರನ್ಸ್ ಇಲ್ಲದೇ ಮ್ಯಾರಥಾನ್ ಓಟಗಾರರು ಪರದಾಡಿದರು. ಮ್ಯಾರಥಾನ್ ಓಟದಲ್ಲಿ ಭಾಗಿಯಾಗಿ ಸ್ವಲ್ಪದರಲ್ಲೇ ಬೈಕ್ ಅಪಘಾತದಿಂದ ತಪ್ಪಿಸಿಕೊಂಡ ಬಾಲಕ ಬಚಾವ್ ಆಗಿದ್ದಾನೆ. ಅವ್ಯವಸ್ಥೆ ವಿರುದ್ಧ ಬಾಲಕರು ಅಸಮಾಧಾನ ವ್ಯಕ್ತಪಡಿಸಿದರು. ಅವ್ಯವಸ್ಥೆ ನೋಡಿದರೆ ಇದು ಕಾಟಾಚಾರದ ಮ್ಯಾರಥಾನ್ ಓಟ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

0

Leave a Reply

Your email address will not be published. Required fields are marked *