ಮರಾಠಿಗರಿಗೆ ಮೀಸಲಾತಿ ನೀಡಲು ಸರ್ಕಾರ ಬದ್ಧ: ಸಿಎಂ ದೇವೇಂದ್ರ ಫಡ್ನವೀಸ್

ಮುಂಬೈ: ಮಹರಾಷ್ಟ್ರ ಸರ್ಕಾರ ಈಗಾಗಲೇ ಜಾರಿಯಲ್ಲಿರುವ ಶೇ. 52ರಷ್ಟು ಮೀಸಲಾತಿಗೆ ಯಾವುದೇ ರೀತಿಯಲ್ಲಿ ಧಕ್ಕೆ ತಾರದೆ ಮರಾಠಿಗರಿಗೆ ಮೀಸಲಾತಿಯನ್ನು ನೀಡಲು ಬದ್ಧವಾಗಿದೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಮರಾಠ ಮೀಸಲಾತಿ ಕುರಿತು ಹೇಳಿಕೆ ನೀಡಿದರು. ಈ ಮೂಲಕ ದಶಕಗಳಿಂದ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಮೀಸಲಾತಿಗಾಗಿ ಹೋರಾಡುತ್ತಿದ್ದ ಮರಾಠ ಸಮುದಾಯದಲ್ಲಿ ಮಂದಹಾಸ ಮೂಡಿದಂತಾಗಿದೆ.

0

Leave a Reply

Your email address will not be published. Required fields are marked *