ಮುಜಾಫರ್​ಪುರ ಅತ್ಯಾಚಾರ ಪ್ರಕರಣ: ನಿತೀಶ್ ರಾಜೀನಾಮೆಗೆ ತೇಜಸ್ವಿ ಒತ್ತಾಯ

ದೆಹಲಿ: ಬಿಹಾರದ ಮುಜಾಫರ್​ಪುರ ಶೆಲ್ಟರ್ ಹೋಮ್ ಅತ್ಯಾಚಾರ ಪ್ರಕರಣದ ಕುರಿತು ಸಿಎಂ ನಿತೀಶ್ ಕುಮಾರ್ ಅವರಿಗೆ ಸಂಪೂರ್ಣ ಮಾಹಿತಿ ಇದೆ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದರು. ಈ ಕುರಿತು ದೆಹಲಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು, ಬಾಲಕಿಯರನ್ನು ಸ್ಥಳಾಂತರಿಸಿರುವ ಕುರಿತು ತಮಗೆ ಗೊತ್ತಿರುವ ಮಾಹಿತಿಯನ್ನು ಬಹಿರಂಗ ಪಡಿಸಲು ಒಂದು ವಾರದ ಗಡುವು ನೀಡುತ್ತೇನೆ ಎಂದ ಅವರು, ವಿಷಯವನ್ನು ಬಹಿರಂಗಪಡಿಸದೇ ಇದ್ದಲ್ಲಿ, ಮದುಬನಿಯಲ್ಲಿ ಮುಷ್ಕರ ನಡೆಸುವುದಾಗಿ ಘೋಷಿಸಿದರು.

ನೈತಿಕ ಹೊಣೆ ಹೊತ್ತು ನಿತೀಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅವರು ರಾಜ್ಯವನ್ನು ನಡೆಸಲು ಅಸಮರ್ಥರಾಗಿದ್ದಾರೆ ಎಂದು ಆರೋಪಿಸಿದ ತೇಜಸ್ವಿ, ನಿತೀಶ್ ಅವರು ಹೇಡಿ ಸಿಎಂ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದರು. ನಾವು ನಮ್ಮ ಹೆಣ್ಣುಮಕ್ಕಳಿಗಾಗಿ ಹೋರಾಡುತ್ತಿದ್ದೇವೆ. ಅವರ ಮೇಲೆ ಅಪರಾಧಗಳು ನಡೆಯುತ್ತಿವೆ. ಆದ್ದರಿಂದ ನಿತೀಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

0

Leave a Reply

Your email address will not be published. Required fields are marked *