ಸರಿಯಾಗಿ ಪಾಠ ಕಲಿಸೋಣ ಎಂದು ಕರೆ ನೀಡಿದ ಪ್ರಕಾಶ್ ರೈ

ಧರ್ಮದ ಹೆಸರಲ್ಲಿ ದ್ವೇಷವನ್ನು ಬಿತ್ತುತ್ತಾ, ಅಭಿವೃದ್ಧಿಯ ಬಗ್ಗೆ ಸಾವಿರ ಸಾವಿರ ಸುಳ್ಳುಗಳನ್ನು ಹೇಳುತ್ತಾ, ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿರುವವರಿಗೆ ಸರಿಯಾದ ಪಾಠ ಕಲಿಸೋಣ ಎಂದು ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಎರಡು ದಿನ ಬಾಕಿ ಇರುವ ವೇಳೆ ಅವರು ಟ್ವೀಟ್ ಮಾಡಿದ್ದು, ಪ್ರಿಯ ಕರ್ನಾಟಕ, ಇದು ನಮ್ಮ ಜವಾಬ್ದಾರಿ ಎಂದಿದ್ದಾರೆ. ಮನುಷ್ಯರನ್ನು, ಮಾನವೀಯತೆಯನ್ನು, ಎಲ್ಲ ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ವಿಶ್ವಮಾನವರಾಗೋಣ ಎಂದು ಅವರು ಟ್ವೀಟ್ ಮಾಡಿದ್ದು, ಇದರೊಂದಿಗೆ ಒಂದು ವಿಡಿಯೋವನ್ನು ಷೇರ್ ಮಾಡಿದ್ದಾರೆ.

ರಾಜಕಾರಣಿಗಳು ಮಾತನಾಡುವ ವೇಳೆ, ನಿಮ್ಮನ್ನು ಅವರು ಹೇಗೆ ಮೂರ್ಖರನ್ನಾಗಿಸುತ್ತಾರೆ ಎಂಬ ವಿಷಯವನ್ನು ತಿಳಿದುಕೊಳ್ಳಿ ಎಂದು ರೈ ಟ್ವೀಟ್ ಮೂಲಕ ಕರೆ ನೀಡಿದ್ದಾರೆ. ದಯವಿಟ್ಟು ಈ ಕೋಮು ರಾಜಕಾರಣದ ಹಿಂದಿರುವ ನಾಳೆಯ ದುರಂತವನ್ನು ಅರ್ಥಮಾಡಿಕೊಳ್ಳಿ ಎಂದಿರುವ ಅವರು, ನಮ್ಮ ಮುಗ್ಧತೆಯನ್ನು ಬಳಸಿ “ಸರ್ವಜನಾಂಗದ ಶಾಂತಿಯ ತೊಟವಾದ “ನಮ್ಮ ನಾಡನ್ನು ರಾಡಿಗೊಳಿಸಲು ಬಿಡದಿರಿ. ಎಲ್ಲರಿಗೊಂದೇ ಸೂರ್ಯ. ಎಲ್ಲ ಮನುಷ್ಯರ ಭೂಮಿ ಇದು ಎಂದಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಮತ ಚಲಾಯಿಸಿ ಎಂದು ಅವರು ಟ್ವೀಟ್ ಮೂಲಕ ಕರೆನೀಡಿದ್ದಾರೆ.

https://twitter.com/prakashraaj/status/994225547637997570

0

Leave a Reply

Your email address will not be published. Required fields are marked *