ನೀರು ಕುಡಿಯೋವಾಗ ಇದನ್ನ ಗಮನದಲ್ಲಿಡಿ

ಒಂದೆರಡು ದಿನ ಊಟವಿಲ್ಲದೇ ಇರಬಹುದು ಆದರೆ ಸ್ವಲ್ಪ ದಣಿವಾದಾಗ, ಬಿಸಿಲಿನ ಸಮಯದಲ್ಲಿ ನೀರು ಕುಡಿಯದೆ ಇರುವುದಕ್ಕೆ ಆಗುವುದೇ ಇಲ್ಲ. ನಮ್ಮ ಶರೀರದ ಬಹುಭಾಗ ನೀರಿನಂಶದಿಂದ ತುಂಬಿದೆ. ನೀರು ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಒಳ್ಳೆಯದು. ಪ್ರತಿನಿತ್ಯ ಸುಮಾರು ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು. ಆದರೆ ಹೇಗೆ ಕುಡಿಯಬೇಕು?

ನಾವು ಹೆಚ್ಚಾಗಿ ನೀರು ಕುಡಿಯುವಾಗ ನಿಂತುಕೊಂಡೇ ಲೋಟ ಅಥವಾ ಬಾಟಲಿಗಳಲ್ಲಿ ನೀರು ಕುಡಿಯುತ್ತೇವೆ. ಕೆಲವೊಬ್ಬರು ಮಲಗಿಯೂ ಕುಡಿಯುವವರು ಇದ್ದಾರೆ ಬಿಡಿ. ಆದರೆ ಆಯುರ್ವೇದದ ಪ್ರಕಾರ ಆ ರೀತಿ ನೀರು ಕುಡಿಯುವುದು ತಪ್ಪು.

ನಿಂತುಕೊಂಡು ನೀರು ಕುಡಿಯುವಾಗ ನಮ್ಮ ದೇಹದಲ್ಲಿರುವ ನರಗಳು ಆತಂಕ ಸ್ಥಿತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಹ ಅಪಾಯವನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರುತ್ತದೆ. ನಿಂತುಕೊಂಡು ಅವಸರದಲ್ಲಿ ನೀರು ಕುಡಿಯುವುದರಿಂದ ವಾಯು ಮತ್ತು ಆಹಾರ ನಾಳಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಕೂತುಕೊಂಡು ಸಾವಕಾಶವಾಗಿ ನೀರು ಕುಡಿಯುವುದು ಉತ್ತಮ ಅಭ್ಯಾಸ.

0

Leave a Reply

Your email address will not be published. Required fields are marked *