3,000 ವರ್ಷಗಳಲ್ಲಿ ಮಹಿಳೆಯರ ಮೇಲೆ ನಡೆಯದಷ್ಟು ದೌರ್ಜನ್ಯ 4 ವರ್ಷಗಳಲ್ಲಿ ನಡೆದಿದೆ: ರಾಹುಲ್ ಗಾಂಧಿ

ರಾಯ್​​ಪುರ: ಸದನದಲ್ಲಿ ರಫೇಲ್ ಅವ್ಯಹಾರ ಕುರಿತು ಹಿಂದೂಸ್ತಾನಕ್ಕೆ ಸುಳ್ಳು ಹೇಳಿದ್ದೇಕೆ ಎಂದು ರಕ್ಷಣಾ ಸಚಿವರಗೆ ಕೇಳಿದೆ. ಆದರೆ, ಸದನದಲ್ಲಿ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಛತ್ತೀಸ್​ಗಡದ ರಾಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಪ್ರಧಾನಿ ಮೋದಿಯವರು ನನ್ನ ಪ್ರಶ್ನೆಗೆ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲಿಲ್ಲ. ದೂರದರ್ಶನದಲ್ಲಿ ನೋಡಿದಾಗ ಅವರು ನನ್ನ ಪ್ರಶ್ನೆಗೆ ಅತ್ತ ಇತ್ತ ನೋಡುತ್ತಿದ್ದ ಸಂಗತಿ ತಿಳಿಯಿತು. ಕಾವಲುಗಾರರು ಓಡಿಹೋದವರಾಗಿದ್ದು ಏಕೆ? ಎಂದು ಅವರು ಕುಟುಕಿದರು.

ಪಾಕ್ ಪ್ರಧಾನಿ ಹೆಸರು ಪನಾಮಾದಲ್ಲಿ ಬಂದ ನಂತರ ಶಿಕ್ಷೆಯಾಗಿದೆ. ಆದರೆ, ಛತ್ತೀಸ್​ಗಡದ ಸಿಎಂ ಪುತ್ರನ ಹೆಸರು ಪನಾಮಾದಲ್ಲಿದೆ. ಇದುವರೆಗೆ ತನಿಖೆ ಆರಂಭವಾಗಿಲ್ಲ ಎಂದು ಅವರು ಆರೋಪಿಸಿದರು. ಅಲ್ಲದೇ, ಇದು ಬಿಜೆಪಿ-ಎನ್​ಡಿಎಯ ಕಾವಲುಗಾರಿಕೆ ಎಂದು ಲೇವಡಿ ಮಾಡಿದರು. ಬಿಹಾರ, ಉತ್ತರಪ್ರದೇಶದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಒಂದೇ ಒಂದು ಮಾತನ್ನೂ ಆಡಿಲ್ಲ. ಈ ಪ್ರಶ್ನೆ ಭಾರತದ ಎಲ್ಲ ಮಹಿಳೆಯರ ಮನದಾಳದಲ್ಲಿದೆ ಎಂದರು.

ಅಲ್ಲದೇ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತ್ಯಾಚಾರವಾಗುತ್ತಿರುವುದು ಏಕೆ? 3,000 ವರ್ಷಗಳಿಂದ ಮಹಿಳೆಯರ ಮೇಲೆ ನಡೆಯದಿರುವಷ್ಟು ದೌರ್ಜನ್ಯಗಳು 4 ವರ್ಷಗಳಿಂದ ನಡೆದದ್ದು ಏಕೆ? ಎಂದು ಕಳೆದ 4 ವರ್ಷಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಇತ್ಯಾದಿ ವಿಷಯಗಳನ್ನು ಅವರು ಪ್ರಸ್ತಾಪಿಸಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *