ವೆಸ್ಟ್​​ಇಂಡಿಸ್​ ವಿರುದ್ಧದ ಟೆಸ್ಟ್​​ ಪಂದ್ಯಕ್ಕೆ ಟೀಮ್​ ಇಂಡಿಯಾ ಆಯ್ಕೆ

ವೆಸ್ಟ್​ ಇಂಡೀಸ್​, ಸದ್ಯ ಟೀಮ್​ ಇಂಡಿಯಾದ ಪ್ರವಾಸ ಬೆಳೆಸಿದೆ. ಈ ವೇಳೆ ವಿಂಡೀಸ್​ ಭಾರತ ನೆಲದಲ್ಲಿ ಎರಡು ಟೆಸ್ಟ್​​ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಕ್ಕಾಗಿ ಕಮ್​ ಬ್ಯಾಕ್​ ಮಾಡುವ ಕನಸು ಕಂಡಿದ್ದ ಸ್ಟಾರ್​ ಪ್ಲೇಯರ್​​ಗಳಿಗೆ ಪೆಟ್ಟು ಬಿದ್ದಿದೆ. ತವರಿನಲ್ಲಿ ಎದುರಾಳಿಗಳ ಹೆಡೆ ಮುರಿ ಕಟ್ಟುವ ಆಲೋಚನೆ ಮಣ್ಣು ಪಾಲಾಗಿದೆ. ಟೀಮ್​ ಇಂಡಿಯಾ ಸದ್ಯ ಏಷ್ಯಾ ಸಾಮ್ರಾಟನಾಗಿ ಮೆರೆದಾಟ ನಡೆಸಿದೆ. ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ 7ನೇ ಬಾರಿ ಕಪ್​​ಗೆ ಮುತ್ತಿಟ್ಟು ಸಂಭ್ರಮಿಸಿದೆ. ಈ ಜಯದಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​​ ಶರ್ಮಾ ಹಾಗೂ ಶಿಖರ್​ ಧವನ್​ ಪಾತ್ರ ಮುಖ್ಯವಾದದ್ದು. ಇಬ್ಬರು ಸ್ಟಾರ್​ ಓಪನರ್ಸ್​​ ತಮ್ಮ ಅಬ್ಬರದ ಬ್ಯಾಟಿಂಗ್​ ನಿಂದಲೇ ತಂಡಕ್ಕೆ ಪ್ರಶಸ್ತಿಯ ಮಾಲೆ ತೊಡಿಸಿದ್ದಾರೆ. ಅಲ್ಲದೆ ಈ ಪ್ರದರ್ಶನದ ಬಲದಿಂದಲೇ ರೋಹಿತ್​ ಬ್ಲ್ಯೂ ಜೆರ್ಸಿ ಬದಲು, ವೈಟ್​ ಜೆರ್ಸಿ ತೊಡುವ ಪ್ಲಾನ್​ ಸಹ ಮಾಡಿಕೊಂಡಿದ್ದರು. ಆದ್ರೆ, ಇವರ ಪ್ಲಾನ್​ಗೆ ಸದ್ಯಕ್ಕೆ ಫುಲ್​ ಸ್ಟಾಪ್​ ಬಿದ್ದಿದೆ.

ಟೀಮ್​ ಇಂಡಿಯಾ ವಿಂಡೀಸ್​ ವಿರುದ್ಧ ಟೆಸ್ಟ್​ ಸರಣಿಗೆ ತಂಡವನ್ನು ಆಯ್ಕೆ ಮಾಡಿದಾಗ, ಈ ಇಬ್ಬರು ಸ್ಟಾರ್ ಪ್ಲೇಯರ್ಸ್​ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಊಹೆ ಎಲ್ಲರಲ್ಲೂ ಇತ್ತು. ಆದ್ರೆ, ಈ ನಿರೀಕ್ಷೆ ಹುಸಿಯಾಗಿದೆ. ರೋಹಿತ್​ ಶರ್ಮಾ ಇಷ್ಟೇ ಪಂದ್ಯಗಳಿಂದ 317 ರನ್​ ಕಲೆ ಹಾಕಿದ್ದಾರೆ. ಈ ಜೋಡಿ ವಿರಾಟ್​ ಕೊಹ್ಲಿ ಅನುಪಸ್ಥಿತಿಯನ್ನು ದೂರವಾಗಿಸಿದೆ ಎಂದ್ರೆ ತಪ್ಪಾಗಲಾರದು. ಟೀಮ್​ ಇಂಡಿಯಾದ ಹಿಟ್​ ಮ್ಯಾನ್​ ಖ್ಯಾತೆಯ ರೋಹಿತ್​ ಶರ್ಮಾಗೆ ವೈಟ್​ ಜೆರ್ಸಿ ತೊಡುವ ಭಾಗ್ಯ ಈ ಭಾರಿಯೂ ಲಭಿಸದೆ ಇರೋದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಇನ್ನು ರೋಹಿತ್​ ಶರ್ಮಾ ಜೊತೆ ಇನ್ನೋರ್ವ ಸ್ಟಾರ್ ಪ್ಲೇಯರ್​​ಗೆ ಹೀಗೇ ಬೇಸರಾಗಿದೆ. ಹೌದು ಟೀಮ್​ ಇಂಡಿಯಾ ಪರ ಇಂಗ್ಲೆಂಡ್​ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಇತಿಹಾಸ ನಿರ್ಮಿಸಿದ್ದ ದಾಖಲೆಯ ವೀರ ಕರುಣ್​ ನಾಯರ್​​, ತ್ರಿಶಕ ಬಾರಿಸಿ ಅಬ್ಬರಿಸಿದ್ರು. ಈ ಸ್ಟಾರ್​ ಪ್ಲೇಯರ್ ಟೀಮ್​ ಇಂಡಿಯಾಕ್ಕೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದ್ರೆ ಸಿಕ್ಕ ಅವಕಾಶದಲ್ಲಿ ಕರುಣ್​ ಸ್ಥಿರ ಪ್ರದರ್ಶನ ನೀಡಿಲ್ಲ. ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿಯ ಬಳಿಕ ನಡೆದ ಎಲ್ಲಾ ಟೆಸ್ಟ್​​ ಸರಣಿಗೂ ಕರುಣ್​ ರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಆದ್ರೆ, ಆಸ್ಟ್ರೇಲಿಯಾ ವಿರುದ್ಧ ಮಾತ್ರ ಕಣಕ್ಕೆ ಇಳಿಸಿತ್ತು. ಆದ್ರೆ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್​ ಪ್ರವಾಸದಲ್ಲಿ ಇವರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ನೀಡಲಿಲ್ಲ. ಈ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈಗ ಹಠಾತನೇ ತಂಡದಿಂದ ಕೈ ಬಿಟ್ಟಿದಕ್ಕೆ ಅಭಿಮಾನಿಗಳು ಕೆಂಡ ಕಾರಿದ್ದಾರೆ.

ಟೀಮ್​ ಇಂಡಿಯಾದಲ್ಲಿ ತ್ರಿವಿಕ್ರಮ ಕರುಣ್​ ನಾಯರ್​​ಗೆ ಸ್ಥಾನ ಕೊಂಚ ಕಠಿಣ ಎಂದೇ ಹೇಳಲಾಗ್ತಿದೆ. ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಿಸುವ ಮುನ್ನ ಕರುಣ್​ ದೇಶಿಯ ಟೂರ್ನಿಯಲ್ಲಿ ರನ್​ ಮಹಲ್​ ಕಟ್ಟಿ, ಆಯ್ಕೆ ದಾರರ ಮನ ಗೆಲ್ಲ ಬೇಕಿದೆ ಅಂದಾಗ ಮಾತ್ರ ವೈಟ್​ ಜೆರ್ಸಿ ತೊಡುವ ಕನಸು ನನಸಾಗುತ್ತದೆ.

0

Leave a Reply

Your email address will not be published. Required fields are marked *