ನೂತನ ಲೋಕಾಯುಕ್ತರಾಗಿ ನ್ಯಾ. ವಿಶ್ವನಾಥ್ ಶೆಟ್ಟಿ

ನೂತನ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವ್ರು ನೇಮಕಗೊಂಡಿದ್ದಾರೆ. ರಾಜ್ಯಪಾಲ ವಜುಭಾಯ್​ ವಾಲಾ ಅವ್ರು ಇಂದು ಅಧಿಕೃತವಾಗಿ  ಆದೇಶ ಹೊರಡಿಸಿದ್ದಾರೆ. 2015ರಲ್ಲಿ ನಿ. ನ್ಯಾಯಮೂರ್ತಿ ಭಾಸ್ಕರ್ ರಾವ್ ಮೇಲೆ ಭ್ರಷ್ಟಚಾರದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಲೋಕಾಯುಕ್ತ ಹುದ್ದೆಗೆ ಸರ್ಕಾರ ಹಲವು ಹೆಸರುಗಳನ್ನು ಶಿಫರಾಸು ಮಾಡಿತ್ತು. ಕೊನೆಗೆ ನಿ.ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ಹೆಸರನ್ನು ಶಿಫರಾಸು ಮಾಡಿದ್ರೂ ಅವ್ರ ಮೇಲೂ ಆರೋಪಗಳು ಕೇಳಿಬಂದಿದ್ದವು. ಬಳಿಕ ರಾಜ್ಯಪಾಲರಿಗೆ ಸರ್ಕಾರ ಸ್ಪಷ್ಟೀಕರಣ ನೀಡಿದ ನಂತರ ಇದೀಗ ರಾಜ್ಯಪಾಲರು ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರನ್ನು ನೂತನ ಲೋಕಾಯುಕ್ತರಾಗಿ ನೇಮಕಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

 

0

Leave a Reply

Your email address will not be published. Required fields are marked *