ಐಪಿಎಲ್​ ನಂತ ನಿವೃತ್ತಿ ಘೋಷಿಸಲಿರುವ ಬದ್ರಿನಾಥ್​..

ತಮಿಳುನಾಡಿನ ಪ್ರಸಿದ್ಧ ಆಟಗಾರರೊಬ್ರು ಫಸ್ಟ್​ ಕ್ಲಾಸ್​ ಕ್ರಿಕೆಟ್​​ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ. ಈ ಆಟಗಾರ ಕೆಲ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು.ಜೊತೆಗೆ ಐಪಿಎಲ್​ನಲ್ಲಿ ಎರಡು ಬಾರಿ ಚಾಂಪಿಯನ್​ ಆಗಿರುವ ತಂಡದ ಪರ ಕೂಡ ಆಡಿದ್ದರು.ತಮಿಳುನಾಡಿನ ಕ್ರಿಕೆಟರ್​ ಸುಬ್ರಮಣ್ಯಂ ಬದ್ರಿನಾಥ್​ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಪ್ರಸ್ತುತ ಐಪಿಎಲ್​ 11ರ ಆವೃತ್ತಿಯಲ್ಲಿ ಕಾಮೆಂಟೇಟರ್​ ಆಗಿ ಕಾರ್ಯನಿರ್ವಹಿಸುತ್ತಿರುವ ಬದ್ರಿನಾಥ್​, ಟೂರ್ನಿ ಮುಗಿದ ನಂತರ ಅಧಿಕೃತವಾಗಿ ತಮ್ಮ ನಿವೃತ್ತಿ ಬಗ್ಗೆ ಘೋಷಿಸಲಿದ್ದಾರೆ. ಕಳೆದ ವರ್ಷವೇ ಬದ್ರಿ, ಕ್ರಿಕೆಟ್​ನಿಂದ ದೂರವಾಗಿದ್ರು ನಿವೃತ್ತಿ ಹೇಳಿರಲಿಲ್ಲ.

ಎಸ್​.ಬದ್ರಿನಾಥ್​ 14 ವರ್ಷ ತಮಿಳುನಾಡು ರಣಜಿ ತಂಡದ ಪರ ಆಡಿದ್ದಾರೆ. ಬಲಗೈ ಬ್ಯಾಟ್ಸ್​ಮನ್ ಆಗಿರುವ ಇವರು 145 ಪಂದ್ಯಗಳಲ್ಲಿ ಬ್ಯಾಟ್​ ಬೀಸಿದ್ದು, 45 ಅರ್ಧಶತಕ ಹಾಗೂ 32 ಶತಕಗಳ ನೆರವಿನಿಂದ 10245 ರನ್​ ಕಲೆಹಾಕಿದ್ದಾರೆ. ತಮಿಳುನಾಡು ತಂಡದ ಪ್ರಮುಖ ಆಟಗಾರ ಆಗಿದ್ದ ಬದ್ರಿ, 2014- 16 ರವರೆಗೆ ವಿದರ್ಭ ತಂಡವನ್ನು ರಣಜಿಯಲ್ಲಿ ಮುನ್ನೆಡೆಸಿದ್ದರು. 2016 ರಿಂದ 17 ರವರೆಗೆ ಹೈದ್ರಬಾದ್ ತಂಡದ ಪರ ಕೂಡ ಕಣಕ್ಕಿಳಿದಿದ್ದರು. ಅಲ್ಲದೇ ಐಪಿಎಲ್​ನಲ್ಲಿ ಸಿಎಸ್​ಕೆ ತಂಡದ ಪರ ಕೂಡ ಆಡಿದ್ದರು. 2 ಟೆಸ್ಟ್​ , 7 ಏಕದಿನ, ಹಾಗೂ ಏಕೈಕ ಟಿ-20 ಪಂದ್ಯದಲ್ಲಿ ಬದ್ರಿನಾಥ್​ ಭಾರತವನ್ನು ಪ್ರತಿನಿಧಿಸಿದ್ದರು. 37 ವರ್ಷ ವಯಸ್ಸಿನ ಬದ್ರಿ, ದೇಶೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್​ ಕಲೆಹಾಕಿದವರ ಪೈಕಿ ಒಬ್ಬರಾಗಿದ್ದಾರೆ. ನಿವೃತ್ತಿ ನಂತರ ವೀಕ್ಷಕ ವಿವರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬದ್ರಿನಾಥ್ ನಿರ್ಧರಿಸಿದ್ದಾರೆ. ಅಲ್ಲದೇ ಹೆಂಡತಿ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುವುದಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್​ನಿಂದ ದೂರವಾಗುತ್ತಿರುವುದಾಗಿ ತಿಳಿಸಿದ್ದಾರೆ. ಅದೇನೆ ಇರಲಿ ಬದ್ರಿನಾಥ್​ ನಿವೃತ್ತಿ ಜೀವನ ಸುಖಕರವಾಗಿರಲಿ. ಜೊತೆಗೆ ಅವರ ಆಸೆಗಳೆಲ್ಲಾ ಈಡೇರಲಿ ಎನ್ನುವುದೇ ಅಭಿಮಾನಿಗಳ ಆಶಯ.

ಸ್ಫೋರ್ಟ್ಸ್​ ಬ್ಯೂರೊ ಸುದ್ದಿ ಟಿವಿ

0

Leave a Reply

Your email address will not be published. Required fields are marked *