ಹಿರಿಯ ಬಾಲಿವುಡ್ ನಟ ಓಂಪುರಿ ಇನ್ನಿಲ್ಲ

ಬಾಲಿವುಡ್ ಖ್ಯಾತ ನಟ ಓಂಪುರಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಚಾಪು ಮೂಡಿಸಿರುವ ಓಂಪುರಿ,  ಕನ್ನಡ, ಹಿಂದಿ , ಇಂಗ್ಲೀಷ್​  ಸೇರಿದಂತೆ  6 ಭಾಷೆಗಳಲ್ಲಿ ನಟಿಸಿದ್ದಾರೆ. ಹಾಲಿವುಡ್​​ನಲ್ಲೂ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ. ಕನ್ನಡದಲ್ಲಿ ತಬ್ಬಲಿಯೂ ನಿನಾದೆ  ಮಗನೆ, ಶಿವರಾಜ್ ಕುಮಾರ್​ ​ ಅಭಿನಯದ ಎ.ಕೆ. 47, ದರ್ಶನ್​ ಅಭಿನಯದ  ಧ್ರುವ ಚಿತ್ರ ಸೇರಿದಂತೆ   ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಓಂಪುರಿಯವರಿಗೆ ಪದ್ಮಶ್ರೀ ಸೇರಿದಂತೆ, 6 ಬಾರಿ ಫಿಲ್ಮ್​ ಫೇರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 

1976ರಲ್ಲಿ ಮರಾಠಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾದ ಓಂ ಪುರಿ
1977ರಲ್ಲಿ ತಬ್ಬಲಿಯು ನೀನಾದೆ ಮಗನೆ ಅಭಿನಯ
1999ರಲ್ಲಿ ಶಿವಣ್ಣ ಅಭಿನಯದ ಎ .ಕೆ. 47 ಚಿತ್ರದಲ್ಲಿ ನಟನೆ
2002ರಲ್ಲಿ ದರ್ಶನ್ ಅಭಿನಯದ ಧ್ರುವ ಚಿತ್ರದಲ್ಲಿ ನಟನೆ
2016ರಲ್ಲಿ ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ನಟನೆ
2016ರಲ್ಲಿ ಟೈಗರ್ ಚಿತ್ರದಲ್ಲೂ ನಟಿಸಿದ ಓಂ ಪುರಿ
1982ರಲ್ಲಿ ಆರೋಹಣ್​ ಚಿತ್ರದ ನಟನೆಗೆ ರಾಷ್ಟ್ರೀಯ ಫೀಲ್ಮ್​ ಫೇರ್​ ಪ್ರಶಸ್ತಿ
1984ರಲ್ಲಿ ಅರ್ಧಸತ್ಯ ಚಿತ್ರದ ನಟನೆಗೆ ರಾಷ್ಟ್ರೀಯ ಫೀಲ್ಮ್ ಫೇರ್ ಪ್ರಶಸ್ತಿ
1990ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿರುವ ಓಂಪುರಿ
ರಂಗಭೂಮಿ ಕಲಾವಿದನಾಗಿ ಮಿಂಚು ಹರಿಸಿದ್ದ ಓಂಪುರಿ
ಬಾಲಿವುಡ್​, ಹಾಲಿವುಡ್​ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟನೆ
ಕಲಾತ್ಮಕ ಚಿತ್ರಗಳಲ್ಲಿ ಅದ್ಭುತ ನಟನೆ ಮೂಲಕ ಗಮನ ಸೆಳೆದಿರುವ ಓಂಪುರಿ
130ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಓಂಪುರಿ 

 

0

Leave a Reply

Your email address will not be published. Required fields are marked *