ಫೆಬ್ರವರಿ 3ರ ಒಳಗೆ ನಿಲುವು ಸ್ಪಷ್ಟಪಡಿಸಿ: ವಾಟಾಳ್ ನಾಗರಾಜ್

ಬೆಂಗಳೂರು: ಮಹದಾಯಿ, ಕಳಸಾ-ಬಂಡೂರಿ ಬಿಕ್ಕಟ್ಟು ಕುರಿತಂತೆ ಜನವರಿ 25ರಂದು ನಡೆಸಿದ ಕರ್ನಾಟಕ ಬಂದ್ ಯಶಸ್ವಿಯಾಗಿದೆ. ಬಂದ್ ಕುರಿತಂತೆ ಎಲ್ಲರೂ ನನ್ನನ್ನು ತೇಜೋವಧೆ ಮಾಡಿದ್ದರು. ಬಂದ್ ಮಾಡೋಕೆ ನನಗೇನು ಕೆಲಸ ಇಲ್ಲ ಅಂತ ಅಂದುಕೊಂಡಿದ್ದಾರೆ. ರಾಜಕೀಯ ಬಿಟ್ಟು ಮೊದಲು ನೀರು ಬಿಡಿಸಿ, ನಾನು ಫೆಬ್ರವರಿ 4ರ ಬಂದ್​ ಕೈಬಿಡುತ್ತೇನೆ. ಫೆಬ್ರವರಿ 3ರ ಒಳಗೆ ಬಿಜೆಪಿಯವರು ಪ್ರಧಾನಿಯಿಂದ ಭರವಸೆ ಕೊಡಿಸಲಿ. ರಾಜ್ಯದ ಬಿಜೆಪಿಯವರಿಗೆ ಛಲ ಇದ್ದರೆ ಈ ಕಾರ್ಯ ಮಾಡಲಿ. ಮಹದಾಯಿ ಬಿಕ್ಕಟ್ಟಿಗೆ ಪ್ರಧಾನಿ ಮಧ್ಯ ಪ್ರವೇಶಕ್ಕೆ ಹೋರಾಟಗಾರರು ಬಿಗಿಪಟ್ಟು ಹಿಡಿದು, ಪ್ರಧಾನಿ ತಮ್ಮ ನಿಲುವು ಸ್ಪಷ್ಟಪಡಿಸದೇ ಹೋದರೆ ಫೆಬ್ರವರಿ 4ರ ಬಂದ್ ಖಚಿತ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದರು.

0

Leave a Reply

Your email address will not be published. Required fields are marked *