ಪಿಂಕ್ ಹೊಯ್ಸಳ ಮಹಿಳಾ ಪೊಲೀಸರ ಮೇಲೆ ಪೋಲಿಗಳ ಕಣ್ಣು..!

ಬೆಂಗಳೂರು: ಇಷ್ಟು ದಿನ ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಅನ್ನೋ ಮಾತು ಕೇಳಿ ಬರ್ತಿತ್ತು. ಆದರೆ ಈಗ ಮಹಿಳೆಯರ ರಕ್ಷಣೆಗೆ ಅಂತಾ ಇರೋ ಪಿಂಕ್ ಹೊಯ್ಸಳ ಪೋಲೀಸರಿಗೂ ರಕ್ಷಣೆ ಇಲ್ಲ ಅನ್ನುವಂತಾಗಿದೆ. ಆಶ್ಚರ್ಯ ಆದ್ರೂ ಈ ಮಾತು ನಿಜ. ರಾಜಧಾನಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಅನ್ನೋ ಕಾರಣಕ್ಕಾಗಿ, ರಾಜ್ಯ ಸರ್ಕಾರವು ಮಹಿಳೆಯರ ರಕ್ಷಣೆಗೆ ಅಂತ ಪಿಂಕ್ ಹೊಯ್ಸಳಗಳನ್ನು ನಿಯೋಜನೆ ಮಾಡಿ ಮಹಿಳಾ ಪೇದೆಗಳನ್ನು ನಿಯೋಜನೆ ಮಾಡಿದೆ. ಆದರೆ ಸೋಮವಾರ ರಾತ್ರಿ ಸುಮಾರು ಒಂದು ಮೂವತ್ತರ ಸುಮಾರಿನಲ್ಲಿ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ಸರ್ಕಲ್ ನಲ್ಲಿ ಪಿಂಕ್ ಹೊಯ್ಸಳದಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಕಂಠ ಪೂರ್ತಿ ಕುಡಿದ ಮತ್ತಿನಲ್ಲಿದ್ದ ಇಬ್ಬರು ವ್ಯಕ್ತಿಗಳು, ಹೊಯ್ಸಳ ವಾಹನದಲ್ಲಿದ್ದ ಇಬ್ಬರು ಮಹಿಳಾ ಪೇದೆಗಳನ್ನು ನೋಡಿ ಡಾರ್ಲಿಂಗ್ಸ್ ಅಂತ ಇಬ್ಬರ ಬಳಿ ಅಸಭ್ಯವಾಗಿ ವರ್ತಿಸಿ, ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಈ ವಿಚಾರ ತಿಳಿದ ಇತರೇ ಕರ್ತವ್ಯ ನಿರತ ಪೊಲೀಸರು, ತಕ್ಷಣ ಸ್ಥಳಕ್ಕೆ ಬಂದು, ಕುಡಿದು ತೆಲಾಡ್ತಿದ್ದ ರೊಹೀತ್ ಮತ್ತು ವೈಭವ್ ಅನ್ನೋರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಮಹಿಳಾ ಪೇದೆಗಳನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ವೈಯಾಲಿಕಾವಲ್ ಪೊಲೀಸರು, ಪೊಲೀಸ್ ಭಾಷೆಯಲ್ಲಿ ಸತ್ಕಾರ ಮಾಡಿ ಪರಪ್ಪನ ಅಗ್ರಹಾರಕ್ಕೆ ಬಿಟ್ಟು ಬಂದಿದ್ದಾರೆ. ಆದರೆ ಮಹಿಳಾ ಪೇದೆಗಳಿಗೆ ಈ ರೀತಿಯ ಅಭದ್ರತೆ ಉಂಟಾದ್ರೆ ಸಾಮಾನ್ಯ ಮಹಿಳೆಯರ ಗತಿಯೇನು ಅನ್ನೋದು ಸದ್ಯದ ಪ್ರಶ್ನೇ.

ಆಶಿಕ್​​ ಮುಲ್ಕಿ, ಕ್ರೈಂ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *