ಉ.ಪ್ರದೇಶದ ಉಪಚುನಾವಣೆಯಲ್ಲಿ ಎಸ್​ಪಿಗೆ ಭಾರಿ ಗೆಲುವು..!

ಉ.ಪ್ರದೇಶದ ಗೋರಖ್​ಪುರ ಹಾಗೂ ಫುಲ್​ಪುರ ಎರಡೂ ಕ್ಷೇತ್ರಗಳಿಗೆ 26,000 ಮತಗಳ ಆರ್​ ಜಿಹಾನಾಬಾದ್​ ಆರಾರಿಯಾದಲ್ಲೂ ಗೆಲುವು ಫುಲ್​ಪುರ್​ 39,000 ಮತಗಳ ಮುನ್ನಡೆ ಬಿಜೆಪಿಯ ಅಂತ್ಯ ಆರಂಭವಾಗಿದೆ..ಉ.ಪ್ರದೇಶ ಹಾಗೂ ಬಿಹಾರದ ಲೋಕಸಭೆ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು,ಎರಡೂ ರಾಜ್ಯಗಳಲ್ಲೂ ಆಡಳಿತಾರೂಢ ಬಿಜೆಪಿ ಸೋಲು ಅನುಭವಿಸುವುದರ ಮೂಲಕ ಮುಖಭಂಗ ಅನುಭವಿಸಿದೆ. ಉ.ಪ್ರದೇಶದ ಗೋರಖ್​ಪುರ ಹಾಗೂ ಫುಲ್​ಪುರದ ಲೋಕಸಭಾ ಕ್ಷೇತ್ರದಲ್ಲಿ ಕಮಲ ಪಾಳಯ ಮುಗ್ಗರಿಸಿದ್ರೆ, ಬಿಹಾರದ ಆರಾರಿಯಾ ಲೋಕಸಭಾ ಕ್ಷೇತ್ರದಲ್ಲೂ ಕೇಸರಿ ಪಾಳಯ ಹೀನಾಯ ಸೋಲು ಅನುಭವಿಸಿದೆ.

ಫುಲ್​​ಪುರ ಕ್ಷೇತ್ರದಲ್ಲಿ ಫಲಿಸಲಿಲ್ಲ ಕಮಲ ತಂತ್ರಗಾರಿಕೆ….
ಸಮಾಜವಾದಿ ಪಕ್ಷ – 3,37,683 ಮತಗಳು
ಬಿಜೆಪಿ – 2,80,535 ಮತಗಳು
57,148 ಮತಗಳ ಅಂತರದ ಜಯ

ಸಮಾಜವಾದಿ ಪಕ್ಷದ ನಾಗೇಂದ್ರ ಪ್ರತಾಪ್​​ ಸಿಂಗ್​ ಪಟೇಲ್​​ 3,37,683 ಮತಗಳಿಂದ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕುಶಲೇಂದ್ರ ಸಿಂಗ್​​ ಪಟೇಲ್​ 2,80,535 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. 57,148 ಮತಗಳ ಅಂತರದಿಂದ ಸಮಾಜವಾದಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ..ಉಪಚುನಾವಣೆಯಲ್ಲಿ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಜನರ ಆದೇಶಕ್ಕೆ ತಲೆಬಾಗುತ್ತೇವೆ. ಅತಿಯಾದ ಆತ್ಮವಿಶ್ವಾಸದಿಂದ ನಾವು ಸೋತಿದ್ದೇವೆ. ಸೋಲಿನ ಕುರಿತು ಪರಾಮರ್ಶಿಸುತ್ತೇವೆ. ಸೋಲಿನಿಂದ ಪಾಠ ಕಲಿತಿದ್ದೇವೆ ಎಂದಿದ್ದಾರೆ.

ಉ.ಪ್ರದೇಶದ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಗೆಲುವು ಕಂಡ ಬೆನ್ನಲ್ಲೇ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್​ ಯಾದವ್​ ಪ್ರತಿಕ್ರಿಯಿಸಿದ್ದಾರೆ..ಗೋರಖ್​ಪುರ,ಫುಲ್​ಪುರ ಮತದಾರರಿಗೆ ಹಾಗೂ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿಗೆ ಅಖಿಲೇಶ್ ಧನ್ಯವಾದ ಸಲ್ಲಿಸಿದ್ರು..​ ಯುಪಿ ಚುನಾವಣೆ ಫಲಿತಾಂಶ ದಿಟ್ಟ ಸಂದೇಶ ಸಾರಿದೆ ಎಂದ್ರು. ಉ.ಪ್ರದೇಶದಲ್ಲಿ ಬಿಜೆಪಿ ಸೋಲಿನ ಬಗ್ಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಮಾಜವಾದಿ, ಹಾಗೂ ಬಿಎಸ್​ಪಿಗೆ ಅಭಿನಂದನೆ ಸಲ್ಲಿಸಿ, ಇದು ಬಿಜೆಪಿಯ ಅಂತ್ಯದ ಆರಂಭ ಎಂದು ವ್ಯಂಗ್ಯವಾಡಿದ್ದಾರೆ. ಸಮಾಜವಾದಿ ಪಕ್ಷದ ಗೆಲುವಿನ ಬಳಿಕ ಕಾರ್ಯಕರ್ತರು ಸಹಿ ಹಂಚಿ ಸಂಭ್ರಮಿಸಿದ್ರು.

ಇನ್ನು ಬಿಹಾರದ ಆರಾರಿಯಾ ಲೋಕಸಭೆ ಕ್ಷೇತ್ರದಲ್ಲಿಯೂ ಕೇಸರಿ ಪಾಳಯಕ್ಕೆ ಲಾಲು ಪ್ರಸಾದ್​ ಯಾದವ್​ರ ಆರ್​ಜೆಡಿ ಸೋಲಿನ ರುಚಿ ಉಣಿಸಿದೆ. ಇನ್ನೊಂದೆಡೆ ವಿಧಾನಸಭಾ ಕ್ಷೇತ್ರಗಳಾದ ಜೆಹನಾಬಾದ್​ನಲ್ಲಿ ಆರ್​ಜೆಡಿ ಜಯಭೇರಿ ಬಾರಿಸಿದ್ರೆ, ಬಭುವಾದಲ್ಲಿ ಮಾತ್ರ ಕೇಸರಿ ಪಾಳಯ ತನ್ನ ಮಾನ ಉಳಿಸಿಕೊಂಡಿದೆ.

ಆರಾರಿಯಾದಲ್ಲಿ ಬಿಜೆಪಿ ಕೈ ತಪ್ಪಿದ ಗೆಲುವು
ಆರ್​ಜೆಡಿ – 5,09,334 ಮತಗಳು
ಬಿಜೆಪಿ – 4,47,346 ಮತಗಳು
ಗೆಲುವಿನ ಅಂತರ – 61,988 ಮತಗಳು

ಆರಾರಿಯಾದಲ್ಲಿ ಆರ್​ಜೆಡಿ ಅಭ್ಯರ್ಥಿ 5,09,334 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.ಬಿಜೆಪಿ 4,47,346 ಮತಗಳನ್ನು ಪಡೆದು ಸೋಲನುಭವಿಸಿದೆ..61,988 ಮತಗಳ ಅಂತರದಿಂದ ಆರ್​ಜೆಡಿ ಗೆಲುವು ದಾಖಲಿಸಿದೆ..ಬಿಹಾರದ ಚುನಾವಣೆಯಲ್ಲಿ ಆರ್​ಜೆಡಿ ಗೆಲುವಿನ ಬಗ್ಗೆ ಜೈಲಿನಲ್ಲೇ ಪ್ರತಿಕ್ರಿಯಿಸಿದ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್​ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಪಿತೂರಿ ಮಾಡುವವರ ಸೋಲಾಗಿದೆ ಎಂದಿದ್ದಾರೆ.ಮೊನ್ನೆಯಷ್ಟೇ ತ್ರಿಪುರಾದಲ್ಲಿ ಐತಿಹಾಸಿಕ ಗೆಲುವು ದಾಖಲಸಿದ್ದ ಬಿಜೆಪಿಗೆ ಉ.ಪ್ರದೇಶ ಹಾಗೂ ಬಿಹಾರ ದ ಸೋಲು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅತಿಯಾದ ಆತ್ಮ ವಿಶ್ವಾಸದಿಂದ ಗೆದ್ದು ಬೀಗುತ್ತಿದ್ದ ಕಮಲ ಪಾಳಯವನ್ನು ಜನ ತಿರಸ್ಕರಿಸಿದ್ದು,ಕೇಸ ರಿ ಪಾಳಯದಲ್ಲಿ ಸೋಲಿನ ಬಗ್ಗೆ ಪರಾಮರ್ಶೆ ನಡೆಯುತ್ತಿದೆ

ಜ್ಯೋತಿ ದಫೇದಾರ್,ನ್ಯಾಷನಲ್​ ಡೆಸ್ಕ್​ ಸುದ್ದಿ ಟಿವಿ

0

Leave a Reply

Your email address will not be published. Required fields are marked *