ಕೇಂದ್ರದ ಮಹತ್ವಾಕಾಂಕ್ಷೆಯ ಬಜೆಟ್​ ಮಂಡನೆ

ಇಂದು ಎನ್​ಡಿಎ ನೇತೃತ್ವದ ಕೇಂದ್ರ ಸರ್ಕಾರ ಸಾಮಾನ್ಯ ಬಜೆಟ್​ ಹಾಗೂ ರೈಲ್ವೆ ಬಜೆಟ್​ ಮಂಡಿಸಲಿದೆ.. ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಕೊನೆಯ ಬಜೆಟ್​ ಇದಾಗಿದ್ದು, 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್​ ಸಿದ್ಧಪಡಿಸಲಾಗಿದೆ. ಇನ್ನು ಕರ್ನಾಟದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯಕ್ಕೂ ಹೆಚ್ಚಿನ ಕೊಡುಗೆ ಸಿಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವ್ಯಾವ ಕ್ಷೇತ್ರಕ್ಕೆ ಯಾವ ರೀತಿ ಬಜೆಟ್​ ಅನ್ವಯವಾಗಲಿದೆ ಎಂಬುದರ ಅವಲೋಕನ ಇಲ್ಲಿದೆ.

ಇಂದು ಕೇಂದ್ರದ ಮಹತ್ವಾಕಾಂಕ್ಷೆಯ ಬಜೆಟ್​ ಮಂಡನೆ
ಕರ್ನಾಟಕಕ್ಕೆ ಸಿಗಲಿದೆಯಾ ಭರಪೂರ ಕೊಡುಗೆ?

ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಇಂದು 2018-19 ನೇ ಸಾಲಿನ ಬಜೆಟ್ ಮಂಡಿಸಲಿದೆ.​ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಕೊನೆಯ ಬಜೆಟ್​ ಇದಾಗಲಿದೆ. ಹಾಗಾಗಿ ಇಂದು ಎಲ್ಲರ ಕಣ್ಣು ಅರುಣ್​ ಜೇಟ್ಲಿ ಮಂಡಿಸುವ ಬಜೆಟ್​ ಮೇಲೆ ನೆಟ್ಟಿದೆ..

ಕೇಂದ್ರ ಬಜೆಟ್​ನಲ್ಲಿ ಕೆಲವು ಕ್ಷೇತ್ರಗಳಿಗೆ ಪ್ರಾಮುಖ್ಯತೆ ನೀಡುವ ಸಾಧ್ಯತೆಯಿದೆ.

ಯಾವುದಕ್ಕೆ ಪ್ರಾಮುಖ್ಯತೆ – ಕೃಷಿ, ಸಣ್ಣ ಕೈಗಾರಿಕೆ ಉದ್ಯೋಗ ಸೃಷ್ಟಿ
ಸಣ್ಣ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬಹುದು
ಪ್ರಮುಖ ನಿರೀಕ್ಷೆಗಳು  –      ಕಾರ್ಪೋರೇಟ್​ ತೆರಿಗೆ ಇಳಿಕೆ, ಆದಾಯ ತೆರಿಗೆ ಮಿತಿ ಏರಿಕೆ
ರಸಗೊಬ್ಬರ ಸಬ್ಸಿಡಿ ಇಳಿಕೆ, ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ
ಡಿಜಿಟಲ್​ ವ್ಯವಹಾರಕ್ಕೆ ಪ್ರೋತ್ಸಾಹ

ಕೇಂದ್ರ ಬಜೆಟ್​ನ ಹೈಲೈಟ್ಸ್
=====================

ತೆರಿಗೆಗಳು:
ಕಾರ್ಪೋರೇಟ್​ ತೆರಿಗೆ
1.ಕಾರ್ಪೋರೇಟ್​ ತೆರಿಗೆ ಪ್ರಮಾಣ ಇಳಿಕೆಯಾಗುವ ಸಾಧ್ಯತೆ
2.ಬದಲಿ ತೆರಿಗೆ ಪ್ರಮಾಣ ಶೇ.18.5 ರಿಂದ 15ಕ್ಕೆ ಇಳಿಕೆ
3.ವೈಯಕ್ತಿಕ ತೆರಿಗೆ ಕಡಿತವಾಗುವ ಸಾಧ್ಯತೆ

ಕೃಷಿ

1.ಕೃಷಿ ವಲಯದಲ್ಲಿ ಹೂಡಿಕೆ ಉತ್ತೇಜನ
2.ಬೆಳೆ ವಿಮೆ ಯೋಜನೆಗಳಿಗೆ ಹೆಚ್ಚಿನ ನಿಧಿ ಮೀಸಲಿಡುವ ಸಾಧ್ಯತೆ
3.ರಸಗೊಬ್ಬರ ಸಬ್ಸಿಡಿಗಳನ್ನು ತಗ್ಗಿಸುವುದು

ಬ್ಯಾಂಕುಗಳು:

1.ಸಾಲದಾತರ ನಿಷ್ಕ್ರಿಯ ಸ್ವತ್ತುಗಳಿಗೆ ಪೂರ್ಣ ಪ್ರಮಾಣದ ತೆರಿಗೆ ಕಡಿತ
2.ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಈಗಿರುವ 10,000 ರೂ.ಗಳಿಂತ ಹೆಚ್ಚಿಸುವುದು
3.ದಿವಾಳಿತನದಲ್ಲಿರುವವರಿಗೆ ತೆರಿಗೆ ವಿನಾಯಿತಿ ನೀಡುವುದು

ಮೂಲಸೌಕರ್ಯಗಳು:
1.ರಸ್ತೆ ನಿರ್ಮಾಣದ ಯೋಜನೆಗಳಿಗೆ ಶೇ.10-15 ರಷ್ಟು ಹೂಡಿಕೆ ಹೆಚ್ಚಳ
2.ಭಾರತ್​ ಮಾಲಾ ಯೋಜನೆಗೆ ಬೆಂಬಲ ನೀಡುವುದು
3.ರೈಲ್ವೆ ಹೂಡಿಕೆಯನ್ನು ಹಿಂದಿನ ಬಜೆಟ್​ಗಿಂತ ಶೇ.10 ರಷ್ಟು ಹೆಚ್ಚಿಸುವುದು

ಐಟಿ/ತಂತ್ರಜ್ಞಾನ

1.ಡಿಜಿಟಲ್‌ ವಹಿವಾಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು
2.ಮೊಬೈಲ್‌ ಫೋನ್‌ಗಳು, ಟ್ಯಾಬ್ಲೆಟ್‌ ಕಂಪ್ಯೂಟರ್‌ಗಳಿಗೆ ಅಬಕಾರಿ ಸುಂಕ ಕಡಿತ
3.ಟೆಲಿಕಾಂ ಸೇವೆಗಳ ಜಿಎಸ್‌ಟಿ ದರವನ್ನು ಶೇ.18ರಿಂದ ಶೇ 12ಕ್ಕೆ ಇಳಿಸುವುದು

ಸಾರಿಗೆ:
1.15ಕ್ಕೂ ಹೆಚ್ಚು ಹಳೆಯದಾದ ವಾಣಿಜ್ಯ ವಾಹನಗಳ ವಿಲೇವಾರಿ ನೀತಿ ಘೋಷಣೆ
2.ವಿದ್ಯುತ್‌ ಚಾಲಿತ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಈಗಿನ ಶೇ.12ರಿಂದ ಇಳಿಸುವುದು

ರಿಯಲ್‌ ಎಸ್ಟೇಟ್‌:

1.ನಿರ್ಮಾಣ ಹಂತದ ಯೋಜನೆಗಳಿಗೆ ಜಿಎಸ್‌ಟಿ ದರವನ್ನು ಈಗಿನ ಶೇ. 12ರಿಂದ ಮತ್ತಷ್ಟು ಇಳಿಸುವುದು
2.ಕೈಗೆಟುಕುವ ಮನೆಗಳ ನಿರ್ಮಾಣಕ್ಕೆ ಹೆಚ್ಚು ವೆಚ್ಚ ಮಾಡುವುದು
3.ಮನೆ ಖರೀದಿ ಮೇಲಿನ ಜಿಎಸ್​ಟಿಯನ್ನು ಶೇ 12ರಿಂದ ಮತ್ತಷ್ಟು ತಗ್ಗಿಸುವುದು

ತೈಲ ಮತ್ತು ನೈಸರ್ಗಿಕ ಅನಿಲ:
1.ತೈಲ ಮತ್ತು ಅನಿಲ ಶೋಧನೆ ಮತ್ತು ಉತ್ಪಾದನೆ ಮೇಲಿನ ಸೆಸ್‌ನ್ನು ಶೇ.20 ರಿಂದ ಶೇ. 8-10 ಕ್ಕೆ ಇಳಿಕೆ
2.ನೈಸರ್ಗಿಕ ಅನಿಲದ ಮೇಲಿನ ಜಿಎಸ್‌ಟಿ ಇಳಿಕೆ
3.ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಎಲ್​ಪಿಜಿ, ಸೀಮೆಎಣ್ಣೆ ಮಾರಾಟ ಮಾಡುವ ಕಂಪೆನಿಗಳಿಗೆ ಹೆಚ್ಚಿನ ಸಬ್ಸಿಡಿ

ಚಿನ್ನ
1.ಕಳ್ಳಸಾಗಣೆ ತಡೆಯಲು ಆಮದು ಸುಂಕವನ್ನು ಈಗಿನ ಶೇ. 10ರಿಂದ ಶೇ 2-4ಕ್ಕೆ ಇಳಿಸುವುದು

 ಸದ್ಯದಲ್ಲೇ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದ ಮತದಾರರನ್ನು ಒಲಿಸಿಕೊಳ್ಳಲು ಈ ಬಜಟ್​ನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.ಸಾಮಾನ್ಯ ಬಜೆಟ್​ ಜೊತೆಯೇ ರೈಲ್ವೆ ಬಜೆಟ್​ ಕೂಡ ಮಂಡನೆಯಾಗಲಿದ್ದು, ರೈಲ್ವೇ ಬಜೆಟ್​ ಮೇಲೆ ಸಾಕಷ್ಟು ಕುತೂಹಲ ನೆಟ್ಟಿದೆ. ರಾಜ್ಯಕ್ಕೆ ಹೊಸ ರೈಲ್ವೇ ಮಾರ್ಗ ಕಲ್ಪನೆಯಾಗಲಿದೆಯೋ ಅಥವಾ ಈಗಿರುವ ರೈಲ್ವೇ ಮಾರ್ಗಕ್ಕೆ ಹೊಸ ರೂಪ ಸಿಗಲಿದೆಯೋ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ..

 

0

Leave a Reply

Your email address will not be published. Required fields are marked *