ಮಯನ್ಮಾರ್ ಮೇಲೆ ಹೆಚ್ಚಿನ ಒತ್ತಡ ಹೇರಬೇಕು: ಅಂಟೋನಿಯೋ ಗುಟೆರಸ್

ಢಾಕಾ: ರೋಹಿಂಗ್ಯನ್ ನಿರಾಶ್ರಿತರ ವಿಷಯದಲ್ಲಿ ವಿಶ್ವ ಸಂಸ್ಥೆ ಮಯನ್ಮಾರ್ ಮೇಲೆ ಹೆಚ್ಚಿನ ಒತ್ತಡ ಹೇರಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅಭಿಪ್ರಾಯಪಟ್ಟಿದ್ದಾರೆ. ನಾವು ನಿರಂತರವಾಗಿ ಮಯನ್ಮಾರ್ ಮೇಲೆ ಒತ್ತಡ ಹೇರುತ್ತಿರಬೇಕು. ಈ ಮೂಲಕ ಸಮಸ್ಯೆಯನ್ನು ಅರಿಯುವಂತೆ ಒತ್ತಡ ತರಬೇಕು ಎಂದು ಅವರು ಹೇಳಿದ್ದಾರೆ ಎಂದು ಡಾಕಾದ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಭೇಟಿ ವೇಳೆ ಗುಟೆರಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ರೋಹಿಂಗ್ಯನ್ ನಿರಾಶ್ರಿತರಿಗೆ ಆಶ್ರಯ ನೀಡಿದ ಬಾಂಗ್ಲಾ ನಡೆ ವಿಶ್ವಮಟ್ಟದಲ್ಲಿ ಶ್ಲಾಘನೆಗೆ ಒಳಗಾಗಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

1977ರಿಂದ ರೋಹಿಂಗ್ಯನ್ನರು ಬಾಂಗ್ಲಾ ಪ್ರವೇಶಿಸುತ್ತಿದ್ದಾರೆ. ಇದುವರೆಗೆ 1.1 ದಶಲಕ್ಷ ರೋಹಿಂಗ್ಯನ್ ನಿರಾಶ್ರಿತರು ಬಾಂಗ್ಲಾ ಪ್ರವೇಶಿಸಿದ್ದಾರೆ. ಅವರಿಗೆ ಮಾನವೀಯತೆಯ ಆಧಾರದ ಮೇಲೆ ನೆಲೆ ಒದಗಿಸಲಾಗಿದೆ ಎಂದು ಶೇಖ್ ಹಸೀನಾರವರು ಗುಟೆರಸ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರೊಂದಿಗೆ 1 ಲಕ್ಷ ರೋಹಿಂಗ್ಯನ್ನರಿಗೆ ದ್ವೀಪ ಒಂದನ್ನು ಸಿದ್ಧಪಡಿಸುತ್ತಿರುವುದಾಗಿ ಕೂಡ ಅವರು ಹೇಳಿದ್ದಾರೆ. ಇಲ್ಲಿ ರೋಹಿಂಗ್ಯನ್ನರು ಉತ್ತಮ ವಾತಾವರಣದಲ್ಲಿ ಬದಕುಲು ಅಗತ್ಯವಾಗಿರುವ ಮೂಲ ಸೌಕರ್ಯಗಳಾದ ಆರೋಗ್ಯ ಸೇವೆ ಸೇರಿದಂತೆ ಇತರ ಸೇವೆಗಳನ್ನು ಒದಗಿಸಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ ರೋಹಿಂಗ್ಯನ್ನರಿಂದ ಸ್ಥಳೀಯರು ಅನೇಕ ಅನನುಕೂಲಗಳನ್ನು ಎದುರಿಸುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಅವರು, ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಬ್ಯಾಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್, ಅಭಿವೃದ್ಧಿ ಚಟುವಟಿಕೆಗಳು ಮತ್ತು ಮಾನವೀಯ ವಿಷಯಗಳನ್ನು ಒಟ್ಟಿಗೆ ನಿರ್ವಹಿಸಬೇಕು. ಬಾಂಗ್ಲಾ ಸರ್ಕಾರಕ್ಕೆ ಅಗತ್ಯವಾದ ಎಲ್ಲ ಬೆಂಬಲವನ್ನೂ ನೀಡುವುದಾಗಿ ಅವರು ಘೋಷಿಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *