ಸಿರಪ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಫಣಿಭೂಷಣ್ ನಿರ್ಮಿಸುತ್ತಿರುವ ಹಾಸ್ಯ ಪ್ರಧಾನ ಚಿತ್ರ “ಮುಂದಿನ ಬದಲಾವಣೆ”ಗೆ ಸೆನ್ಸಾರ್ ಮಂಡಳಿ ಯೂ ಸರ್ಟಿಫಿಕೇಟ್ ನೀಡಿದೆ. ಚಿತ್ರ ಡಿಸೆಂಬರ್ನಲ್ಲಿ ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ಕೋಟಿಶ್ವರ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ, ರಮೇಶ್ಕುಮಾರ್ ಸಂಕಲನವಿದ್ದು, ಕಥೆ, ಚಿತ್ರಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಪ್ರವೀಣ್ಭೂಷಣ್ ಹೊತ್ತಿದ್ದಾರೆ. ತಾರಾಗಣದಲ್ಲಿ ಪ್ರವೀಣ್ಭೂಷಣ್, ಸಂಗೀತ, ಸತೀಶ್, ಪಂಚಗೌರಿ, ಆರ್ಯನ್, ಮಾಲಾಶ್ರೀ, ಚಕ್ರವರ್ತಿ, ಲಕ್ಷ್ಮಣ್ಗೌಡ ಮುಂತಾದವರಿದ್ದಾರೆ.