ಟ್ರಂಪ್ – ಉನ್ ಭೇಟಿ: ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಸಿಂಗಪುರ

ಸಿಂಗಪುರ: ಸಿಂಗಪುರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಪ್ರತಿಕ್ರಿಯಿಸಿದ ಉನ್, ಇಡೀ ಜಗತ್ತು ಈ ಕ್ಷಣವನ್ನು ನೋಡುತ್ತಿದೆ. ಅನೇಕರು ಇದು ಭ್ರಮೆ ಎಂದುಕೊಂಡಿದ್ದಾರೆ. ಇನ್ನು ಕೆಲವರು ವಿಜ್ಞಾನ – ಭ್ರಮೆ ಕುರಿತ ಚಿತ್ರ ನೋಡುತ್ತಿದ್ದೇವೆ ಎಂದುಕೊಂಡಿದ್ದಾರೆ ಎಂದರು. ಇಂದಿನ ಭೇಟಿಯ ಮೂಲಕ 65 ವರ್ಷಗಳ ನಂತರ ಉಭಯ ರಾಷ್ಟ್ರಗಳ ನಡುವೆ ಇದೇ ಮೊಟ್ಟ ಮೊದಲ ಬಾರಿ ಮಾತುಕತೆ ನಡೆದಂಥಾಗಿದೆ.

ಸಿಂಗಪುರದಲ್ಲಿ ಭೇಟಿಯಾದ ಉಭಯ ದೇಶಗಳ ನಾಯಕರು ಸಮಗ್ರ ದಾಖಲೆ ಒಪ್ಪಂದಕ್ಕೆ ಸಹಿ ಹಾಕಿದರು. ನಂತರ ಟ್ರಂಪ್ – ಉನ್ ಜಂಟಿ ಹೇಳಿಕೆ ನೀಡಿದರು. ಈ ವೇಳೆ ಉನ್​ ಅವರಿಗೆ ಶ್ವೇತ ಭವನಕ್ಕೆ ಆಹ್ವಾನಿಸುವುದಾಗಿ ಟ್ರಂಪ್ ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಉನ್, ನಾವು ಒಟ್ಟಿಗೆ ಹೋಗಲು ನಿರ್ಧರಿಸಿದ್ದೇವೆ. ಜಗತ್ತು ಪ್ರಮುಖ ಪರಿವರ್ತನೆಯನ್ನು ಕಾಣುತ್ತದೆ ಎಂದರು.

ಭವಿಷ್ಯದಲ್ಲಿ ಮತ್ತೆ ಭೇಟಿಯಾಗುತ್ತೀರಾ? ಎಂಬ ಪ್ರಶ್ನೆಗೆ, ನಾವು ಮತ್ತೊಮ್ಮೆ ಭೇಟಿಯಾಗುತ್ತೇವೆ ಮತ್ತು ಅನೇಕ ಬಾರಿ ಭೇಟಿಯಾಗುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

0

Leave a Reply

Your email address will not be published. Required fields are marked *