ನಿಮ್ಮ ಸುಂದರ ಉಗುರಿಗೆ ಕಾಳಜಿ ಅಗತ್ಯ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಯುವಕ, ಯುವತಿಯರು ತಮ್ಮ ಉಗುರುಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ, ಅದರ ಕಾಳಜಿಯಲ್ಲಿ ತೊಡಗುತ್ತಾರೆ. ಅದರಲ್ಲೂ ಹುಡುಗಿಯರಿಗೆ ತಮ್ಮ ಉಗುರುಗಳ ಬಗ್ಗೆ ತುಂಬಾ ಒಲವು. ಕಾಲೇಜು, ಪಾರ್ಟಿ ಅಂತ ಹೋಗುವಾಗ  ಸುಂದರವಾದ ಉಗುರುಗಳಿಗೆ ಬಣ್ಣ ಹಚ್ಚಿಕೊಂಡು ಹೋಗುವುದು ಸಾಮಾನ್ಯ. ಆದರೆ ಕೆಲವರು ತಮ್ಮ ಉಗುರುಗಳ ಸರಿಯಾದ ನಿರ್ವಹಣೆ ಮಾಡದಿರುವವರೂ ಇದ್ದಾರೆ. ಸಾಮಾನ್ಯವಾಗಿ ಪೆಡಿಕ್ಯೂರ್ ಮತ್ತು ಮ್ಯಾನಿಕುರ್ ಮಾಡಿಕೊಳ್ಳುವುದರಿಂದ ನಾವು ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಅದನ್ನು ಹೊರತುಪಡಿಸಿ ನೀವು ಗಮನ ಕೊಟ್ಟು ಮಾಡಿಕೊಳ್ಳುವ ಅನೇಕ ಉಪಚಾರಗಳು ಉಗುರಿನ ರಕ್ಷಣೆ ಮಾಡುತ್ತವೆ.
ಕೆಳಗೆ ನೀಡಿರುವ ಅಂಶಗಳತ್ತ ಗಮನ ನೀಡಿದರೆ ನೀವು ಸುಂದರ ಉಗುರಿನ ಒಡೆಯರಾಗುತ್ತೀರಿ.
ನೀವು ನೈಲ್ ಪಾಲಿಶ್ ತೆಗೆದ ಬಳಿಕ ತಪ್ಪದೆ ಕೈ ಮತ್ತು ಉಗುರಿಗೆ ಮಾಯಿಶ್ಚರೈಸರ್ ಕ್ರೀಮ್ ಲೇಪಿಸಿ ನಿಮ್ಮ ಕೈಗಳನ್ನು ನಿಧಾನವಾಗಿ ಸೋಪಿನಿಂದ ಉಜ್ಜಿ ತೊಳೆಯಿರಿ.
ಒಂದು ಸರಳ ಪ್ಯಾಕ್ ಹಾಕಿರಿ. ಈ ಪ್ರಕ್ರಿಯೆಯಿಂದ ಚರ್ಮದಲ್ಲಿ ಅಡಗಿರುವ ಸತ್ತ ಕಣಗಳು ಹೊರ ಬಂದು ಚರ್ಮವು ತಾಜವಾಗುತ್ತದೆ. ನೀವು ಆರೈಕೆ ಮಾಡಿಸಿಕೊಳ್ಳುವ ಸೆಲೂನ್ ಶುಚಿಯಾಗಿದ್ದರೆ ಮಾತ್ರ ಅವರ ಸೇವೆ ಪಡೆಯಿರಿ. ಇದು ನಿಮ್ಮ ಉಗುರಿನ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ.
ನೀವು ಹೆಚ್ಚು ಬಾರಿ ಪೆಡಿಕ್ಯೂರ್ ಮತ್ತು ಮ್ಯಾನಿಕ್ಯೂರ್ ಮಾಡಿಕೊಳ್ಳುತ್ತಿದ್ದರೆ ನಿಮ್ಮದೇ ಸ್ವಂತ ಪೆಡಿಕ್ಯೂರ್ -ಮ್ಯಾನಿಕ್ಯೂರ್ ಸೆಟ್ ಮನೆಯಲ್ಲಿ ತಂದಿಟ್ಟು ಕೊಂಡು ಬಳಸುವುದು ಎಲ್ಲ ರೀತಿಯಿಂದಲೂ ಸೂಕ್ತ. ನೀವು ಬಳಸುವ ಉಪಕರಣಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
ನೀವು ಉಗುರುಗಳಿಗೆ ಬಳಸುವ ಪಾಲೀಶ್ 3 ರಿಂದ 5 ಕ್ಕಿಂತ ಹೆಚ್ಚು ಪಟ್ಟು ಲೇಪಿಸದಿರಿ. ಅತಿಯಾಗಿ ಹಚ್ಚಿದರೆ ಒಣಗುವುದು ತುಂಬಾ ತಡವಾಗುತ್ತದೆ.

0

Leave a Reply

Your email address will not be published. Required fields are marked *