ಅನಾರೋಗ್ಯಕ್ಕೀಡಾದ ಪೆಲಿಕಾನ್ ಪಕ್ಷಿಗೆ ಚಿಕಿತ್ಸೆ

ಮೈಸೂರು: ಬಹಳ ನೀರಿರುವ ಪ್ರದೇಶದಲ್ಲಿ ಕಂಡು ಬರುವ ಪೆಲಿಕಾನ್ ಪಕ್ಷಿ ಕುಕ್ಕರಹಳ್ಳಿ ಕೆರೆಯಲ್ಲಿ ಕಂಡು ಬಂದಿದ್ದು, ಅನಾರೋಗ್ಯಕ್ಕೀಡಾಗಿದೆ. ಕಳೆದೆರಡು ದಿನಗಳಲ್ಲಿ ಅನಾರೋಗ್ಯಕ್ಕೀಡಾದ ಎರಡನೇ ಪಕ್ಷಿ ಇದಾಗಿದೆ. ಮಂಗಳವಾರ ಸಂತೋಷ್ ಎಂಬುವವರು ಅನಾರೋಗ್ಯಕ್ಕೀಡಾದ ಪೆಲಿಕಾನ್ ಪಕ್ಷಿಗೆ ಚಿಕಿತ್ಸೆ ಕೊಡಿಸಿದ್ದರು. ಮಾರನೆಯ ದಿನವೇ ಮತ್ತೊಂದು ಅನಾರೋಗ್ಯಕ್ಕೀಡಾದ ಪಕ್ಷಿ ಕಂಡು ಬಂದಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ವಿಭಾಗದ ಸದಸ್ಯ ಕೆ.ಎಂ.ಜಯರಾಮಯ್ಯ ವಿಷಯ ತಿಳಿಯುತ್ತಿದ್ದಂತೆ ಪಶುಪಾಲನಾ ವೈದ್ಯರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಕೆ.ಎಂ.ಜಯರಾಮಯ್ಯ ಅನಾರೋಗ್ಯಕ್ಕಿಡಾದ ಪೆಲಿಕಾನ್ ಪಕ್ಷಿ ಸಿಕ್ಕಿದೆ ಎಂದು ತಿಳಿಸಿದರು. ಕೂಡಲೇ ಅದರ ಚಿಕಿತ್ಸೆಗೆ ಪಶುಪಾಲನಾ ವಿಭಾಗದ ಉಪನಿರ್ದೇಶಕ ಡಾ.ಪ್ರಸಾದ್ ಮೂರ್ತಿಯವರನ್ನು ಕಳುಹಿಸಲಾಯಿತು. ಪಕ್ಷಿ ಚೇತರಿಸಿಕೊಳ್ಳಲು ವೈದ್ಯರು ಬಿ.ಕಾಂಪ್ಲೆಕ್ಸ್ ನ್ನು ನೀಡಿದ್ದಾರೆ. ಪಕ್ಷಿ ಬಹುಬೇಗ ಚೇತರಿಸಿಕೊಳ್ಳುತ್ತದೆ ಎಂದು ಆಶಿಸುತ್ತೇನೆ ಎಂದರು.

0

Leave a Reply

Your email address will not be published. Required fields are marked *