ಮಂಗಳ ಮುಖಿಯರು ಸಂವಿಧಾನಗಳ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ….

ಮಂಗಳ ಮುಖಿಯರು ಸಂವಿಧಾನಗಳ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಸಮಾಜದಿಂದ ನಿರ್ಲಕ್ಷ್ಮಕ್ಕೆ ಒಳಪಡುತ್ತಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಕರ್ನಾಟಕ ಟ್ರಾನ್ಸ್ ಜೆಂಡರ್​ ಸಮಿತಿ ಸದಸ್ಯೆ ಮಂಗಳಮುಖಿ ಯಾನ ಆಗ್ರಹಿಸಿದರು. ಬೆಂಗಳೂರಿನ ಪ್ರೆಸ್​ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿದ ಕರ್ನಾಟಕ ಟಾನ್ಸ್​ಜೆಂಡರ್ ಸಮಿತಿ ಸದಸ್ಯರು , ಮಂಗಳಮುಖಿಯರನ್ನು ಪೂರ್ಣ ನಾಗರಿಕರನ್ನಾಗಿ ಸೇರ್ಪೆಡೆಗೊಳಿಸಲು ರಾಜ್ಯ ಸರ್ಕಾರ ಕರ್ನಾಟಕ ಟ್ರಾನ್ಸ್ ಜೆಂಡರ್​ ಪಾಲಿಸಿ ಜಾರಿಗೆ ತರಲು ತೀರ್ಮಾನಿದೆ. ಇದು ಸ್ವಾಗತರ್ಹ.ಆದರೆ ರಾಜ್ಯಪಾಲರು ಕೂಡ ಟ್ರಾನ್ಸ್ ಜೆಂಡರ್​ ಪಾಲಿಸಿಗೆ ಅಂಕಿತ ಹಾಕಬೇಕು. ಸರ್ವೋಚ್ಚ ನ್ಯಾಯಾಲಯ ಮಂಗಳಮುಖಿಯರನ್ನು ಪೂರ್ಣ ನಾಗರಿಕರನ್ನಾಗಿ ಸೇರ್ಪಡೆಗೊಳಿಸುವಂತೆ ನೀಡಿದ 2014ರ ತೀರ್ಪನ್ನು ಅನುಷ್ಟಾನಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಮಂಗಳ ಮುಖಿ ಸಮುದಾಯದವರು ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದಾರೆ. ಹಾಗಾಗಿ ಆರೋಗ್ಯ, ಶಿಕ್ಷಣ, ಉದ್ಯೋಗ ವಸತಿ ಸೌಲಭ್ಯ, ದೌರ್ಜನ್ಯ ನಿಂದನೆಯಿಂದ ರಕ್ಷಣೆ ಮುಂತಾದಗಳ ಬಗ್ಗೆ ಕೂಡ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

0

Leave a Reply

Your email address will not be published. Required fields are marked *