ಇಂದು ಎರಡನೇ ಆರು ಬೋಗಿಯ ಮೆಟ್ರೋ ಸೇವೆಗೆ ಚಾಲನೆ

ಇಂದು ಎರಡನೇ ಆರು ಬೋಗಿಯ ಮೆಟ್ರೋ ಸೇವೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರಿದ್ರು. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬೈಯಪ್ಪನ ಹಳ್ಳಿ – ಮೈಸೂರು ರಸ್ತೆ ಮಾರ್ಗದಲ್ಲಿ ನೂತನ ಆರು ಬೋಗಿ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದ್ರು. ಬಳಿಕ ಸಿಎಂ ಮೆಟ್ರೋ ರೈಲಿನಲ್ಲಿ ನಾಗಸಂದ್ರಕ್ಕೆ ಪ್ರಯಾಣಿಸಿದ್ರು. ಸಿಎಂ ಇದ್ದ ಬೋಗಿಗೆ ಮಾಧ್ಯಮ ಹಾಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. 1463 ಕೋಟಿ ವೆಚ್ಚದಲ್ಲಿ 150 ಹೊಸ ಬೋಗಿ ಪೂರೈಸಲು ಬಿಎಂಆರ್ ಸಿಎಲ್ , ಬಿಇಎಂಎಲ್ ಜತೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಈಗಾಗಲೇ ಆರು ಬೋಗಿ ಪೂರೈಕೆ ಮಾಡಿದ್ದು, ಇನ್ನು 144 ಬೋಗಿ ಪೂರೈಕೆ ಮಾಡಬೇಕಿದೆ.ಮುಂದಿನ ವರ್ಷ ಜೂನ್ ಒಳಗಡೆ ಇನ್ನುಳಿದ ಬೋಗಿಯನ್ನು ಬಿಇಎಂಎಲ್ ಪೂರೈಸಬೇಕಿದೆ. ಆರು ಬೋಗಿಯ ಮೆಟ್ರೋದಲ್ಲಿ ಒಂದೇ ಬಾರಿಗೆ 2,004 ಪ್ರಯಾಣಿಕರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸುತುವೆಗೂ ಸಿಎಂ ಚಾಲನೆ ನೀಡಿದರು.

0

Leave a Reply

Your email address will not be published. Required fields are marked *