ಇಂದು ಅಂಬರೀಶ್, ಸುದೀಪ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ರಿಲೀಸ್

ಸಿನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಇಂದು ಅಂಬರೀಶ್, ಸುದೀಪ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ರಿಲೀಸ್ ಆಗಿದೆ. ಮಂಡ್ಯದ ಗಂಡು ಅಂಬರೀಷ್ ಅವರ ಈ ಚಿತ್ರ ಸೆಟ್ಟೇರಿದ ದಿನದಿಂದಲೂ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಅಂಬಿಯ ಯಂಗ್ ಪಾತ್ರಕ್ಕೆ ಕಿಚ್ಚ ಸುದೀಪ್ ಬಣ ಹಚ್ಚಿದ್ದಾರೆ. ಕಿಚ್ಚನಿಗೆ ನಟಿ ಶೃತಿ ಹರಿಹರನ್ ಜೋಡಿಯಾಗಿದ್ದಾರೆ. ಸುಹಾಸಿನಿ- ಅಂಬಿ, ಶೃತಿ – ಸುದೀಪ್ ಕಾಂಬೀನೇಷನ್ನಲ್ಲಿ ಮೂಡಿಬಂದಿರುವ ಈ ಚಿತ್ರ ಚಂದನವನದಲ್ಲಿ ಸನ್ಸ್ಷೇಷನ್ ಕ್ರಿಯೇಟ್ ಮಾಡಿದೆ. ಚಿತ್ರದ ಟ್ರೈಲರ್, ಹಾಡುಗಳು ಈಗಾಗಲೇ ಭಾರೀ ನಿರೀಕ್ಷೆಯನ್ನೇ ಹುಟ್ಟುಹಾಕಿವೆ.

0

Leave a Reply

Your email address will not be published. Required fields are marked *