ಇಂದು ಫಿಫಾ ವಿಶ್ವಕಪ್​​ನಲ್ಲ ಸೆಮಿಫೈನಲ್​ ಫೈಟ್​

ರಷ್ಯಾದಲ್ಲಿ ನಡೆಯುತ್ತಿರುವ ಫಿಪಾ ವಿಶ್ವಕಪ್​ ರೋಚಕ ಘಟ್ಟ ತಲುಪಿದೆ. 64 ಪಂದ್ಯಗಳ ಟೂರ್ನಿಯಲ್ಲಿ 60 ಪಂದ್ಯಗಳು ಮುಗಿದಿದ್ದು, ಇನ್ನು ಕೇವಲ 4 ಪಂದ್ಯಗಳ ನಡೆಯಲಿವೆ. ಈ ಫೈನಲ್​ ನಾಲ್ಕು ಪಂದ್ಯಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಇಂದು ಫ್ರಾನ್ಸ್​ ತಂಡ ಸೆಮಿಫೈನಲ್​​ ಪಂದ್ಯದಲ್ಲಿ ಬೆಲ್ಜಿಯಂ ಸವಾಲು ಎದುರಿಸಲಿದೆ.

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಕಿಕ್​​ ಹೆಚ್ಚಾಗಿದೆ. ಸೆಮಿಫೈನಲ್​ ಪಂದ್ಯಗಳಿಗೆ ತಯಾರಿ ನಡೆದಿದ್ದು, ಇಂದು ಎರಡು ತಂಡಗಳು ಕಾದಾಟ ನಡೆಸಲಿವೆ. ಎರಡನೇ ಬಾರಿಗೆ ಕಪ್​ಗೆ ಮುತ್ತಿಡಲಿರುವ ಆಸೆ ಹೊಂದಿರುವ ಫ್ರಾನ್ಸ್​​, ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ಬೆಲ್ಜಿಯಂ ತಂಡದ ಸವಾಲು ಎದುರಿಸಲಿದೆ.

ಉಭಯ ತಂಡಗಳು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಅಭಿಮಾನಿಗಳಲ್ಲಿ ರೋಚಕತೆ ಮನೆ ಮಾಡಿವೆ. ಯುರೋಪ್​ ಖಂಡದ ಅಕ್ಕ-ಪಕ್ಕದ ರಾಷ್ಟ್ರಗಳ ನಡುವಣ ಹೊರಾಟ ಎಲ್ಲರ ಚಿತ್ತ ಕದ್ದಿದೆ. ಫ್ರಾನ್ಸ್​ ತಂಡ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಉರುಗ್ವೆ ತಂಡವನ್ನು ಮಣಿಸಿದ್ರೆ, ಬೆಲ್ಜಿಯಂ ಎಂಟರ ಘಟ್ಟದ ಪಂದ್ಯದಲ್ಲಿ ಟೂರ್ನಿಯ ಹಾಟ್​​ ಫೆವರೀಟ್​ ತಂಡಗಳಲ್ಲಿ ಒಂದಾದ ಬ್ರೆಜಿಲ್​ ತಂಡಕ್ಕೆ ಸೋಲು ಉಣಿಸಿದೆ. ಬೆಲ್ಜಿಯಂ ಆಡಿರುವ 5 ಪಂದ್ಯಗಳಲ್ಲಿ 14 ಗೋಲು ಬಾರಿಸಿ ವಿಶ್ವಾಸದಲ್ಲಿದೆ. ಇತ್ತ ಫ್ರಾನ್ಸ್​ ಸಹ 9 ಗೋಲು ಬಾರಿಸಿ ತನ್ನ ತೋಳ್ಬಲದ ಪ್ರದರ್ಶನ ಮಾಡಿದೆ.

ಫಿಫಾ ವಿಶ್ವಕಪ್​ ಇತಿಹಾಸದ ಪುಟವನ್ನು ಮೆಲುಕು ಹಾಕಿದಾಗ ಫ್ರಾನ್ಸ್​ ಈ ಪಂದ್ಯ ಗೆಲ್ಲುವ ಫೆವರೀಟ್​ ಎಂದು ಅಂದಾಜಿಸಲಾಗಿದೆ. ಆದ್ರೆ, ಬೆಲ್ಜಿಯಂನ ಸ್ಟಾರ್​ ಆಟಗಾರರು ಪಂದ್ಯದ ಸ್ಥಿತಿಯನ್ನೇ ಬುಡಮೇಲು ಮಾಡುವ ತಾಕತ್ತು ಹೊಂದಿದ್ದಾರೆ. ಉಭಯ ತಂಡಗಳು 73 ಪಂದ್ಯಗಳಲ್ಲಿ ಈಗಾಗಲೇ ಮುಖಾಮುಖಿಯಾಗಿವೆ. ಇದ್ರಲ್ಲಿ ಫ್ರಾನ್ಸ್​​ 24 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ರೆ, ಬೆಲ್ಜಿಯಂ 30 ಪಂದ್ಯಗಳನ್ನು ಗೆದ್ದಿದೆ. ಉಳಿದ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ವಿಶ್ವಕಪ್​​ನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಫ್ರಾನ್ಸ್​​ 4 ರಲ್ಲಿ ಮೇಲುಗೈ ಸಾಧಿಸಿದೆ.

ಬೆಲ್ಜಿಯಂ ತಂಡದ ಪರ ಸ್ಟಾರ್ ಪ್ಲೇಯರ್​ ರೊಮೆಲು ಲೂಕಾಕು ಗೋಲು ಗಳಿಕೆಯಲ್ಲಿ ಮುಂದಿದ್ದಾರೆ. ರೊಮೆಲು 4 ಪಂದ್ಯಗಳಲ್ಲಿ 4 ಗೋಲು ದಾಖಲಿಸಿ ಅಬ್ಬರಿಸಿದ್ದಾರೆ. ಇದ್ರಲ್ಲಿ ಒಂದು ಹೆಡರ್​ ಸಹ ಸೇರಿದೆ. ಫ್ರಾನ್ಸ್​ ತಂಡದ ಗ್ರೀಜ್​ಮನ್​ ಸಹ ಗೋಲು ಗಳಿಕೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಗ್ರೀಜ್​​ಮನ್​ ಆಡಿರುವ 5 ಪಂದ್ಯಗಳಲ್ಲಿ 3 ಗೋಲು ದಾಖಲಿಸಿದ್ದಾರೆ.

ಬೆಲ್ಜಿಯಂ ತಂಡದ ಗೋಲಿ ತಿಬೌಟ್​ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಈ ಪ್ಲೇಯರ್​, 18 ಗೋಲುಗಳನ್ನು ತಡೆದು ಆರ್ಭಟಿಸಿದ್ದಾರೆ. ಈ ಲೆಕ್ಕಾಚಾರದಲ್ಲಿ ಫ್ರಾನ್ಸ್​​ ಹಿಂದಿದೆ. ಇಂದಿನ ಪಂದ್ಯದಲ್ಲಿ ಹ್ಯೂಗೋ ಲೋರೆಸ್​​ ಕಣಕ್ಕೆ ಇಳಿಯುವ ನಿರೀಕ್ಷೆ ಇದೆ.

ರಕ್ಷಣಾ ವಿಭಾಗ, ರೈಟ್​ ವಿಂಗ್​ ಮತ್ತ ಲೆಫ್ಟ್​ ವಿಂಗ್​ ಪ್ಲೇಯರ್​​ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಮಯೋಚಿತ ಪಾಸ್​​ಗಳನ್ನು ನೀಡಿ ಆಡಿದ್ರೆ, ಗೆಲುವಿನ ಬುತ್ತಿಯ ರುಚಿ ಸವಿಯಬಹುದು. ಕಳೆದ ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ಮೆಟ್ಟಿನಿಂತು ಶ್ರೇಷ್ಠ ಪ್ರದರ್ಶನ ನೀಡಲು ಉಭಯ ತಂಡಗಳು ಪ್ಲಾನ್ ಮಾಡಿಕೊಂಡಿವೆ. ಈ ಬಾರಿ ಯಾವ ತಂಡ ಫೈನಲ್​ಗೆ ಲಗ್ಗೆ ಇಡಲಿದೆ ಎಂಬ ಕುತೂಹಲ ಮನೆ ಮಾಡಿದೆ.

0

Leave a Reply

Your email address will not be published. Required fields are marked *