ಸಂವಿಧಾನದ ಮೇಲೆ ದಾಳಿ ನಡೆದಿದೆ: ರಾಹುಲ್ ಗಾಂಧಿ..

ಇಂದು ಸಂವಿಧಾನದ ಮೇಲೆ ದಾಳಿ ನಡೆದಿದೆ
ಛತ್ತೀಸ್​ಗಡದ ರಾಯಪುರದಲ್ಲಿ ರಾಹುಲ್ ವಾಗ್ದಾಳಿ
ಕರ್ನಾಟದಲ್ಲಿ ಒಂದೆಡೆ ಶಾಸಕರು ನಿಂತಿದ್ದಾರೆ
ಮತ್ತೊಂದೆಡೆ ರಾಜ್ಯಪಾಲರು ನಿಂತಿದ್ದಾರೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ
ಆರ್​ಎಸ್​ಎಸ್​​ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ಆರ್​ಎಸ್ಎಸ್​ ಎಲ್ಲ ಸಾಂವಿಧಾನಿಕ ಸಂಸ್ಥೆಗಳಲ್ಲಿ ದಾರಿ ಮಾಡಿಕೊಂಡಿದೆ
ಇಂಥ ಘಟನೆಗಳು ಪಾಕ್​​ನಲ್ಲಿ, ಸರ್ವಾಧಿಕಾರಿ ಅವಧಿಯಲ್ಲಿ ನಡೆಯುತ್ತವೆ

ರಾಯಪುರ: ಇಂದು ಸಂವಿಧಾನದ ಮೇಲೆ ದಾಳಿ ನಡೆದಿದೆ ಎಂದ ಅವರು, ಕರ್ನಾಟದಲ್ಲಿ ಒಂದೆಡೆ ಶಾಸಕರು ನಿಂತಿದ್ದಾರೆ. ಮತ್ತೊಂದೆಡೆ ರಾಜ್ಯಪಾಲರು ನಿಂತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 100 ಕೋಟಿ ರೂ. ಆಮಿಶ ಒಡ್ಡಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ ಎಂದು ಅವರು ಬಿಜೆಪಿ ವಿರುದ್ಧ ಆರೋಪಿಸಿದರು.

ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಛತ್ತೀಸ್​ಗಡದ ರಾಯ್​ಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಂಸದರು ಮೋದಿಯವರ ಭಯದಲ್ಲಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ಬಿಜೆಪಿಯಂಥೆ ಕಾಂಗ್ರೆಸ್ ಎಂದಿಗೂ ಸರ್ಕಾರಿ ಸಂಸ್ಥೆಗಳನ್ನು ನಾಶಪಡಿಸಿಲ್ಲ ಎಂದರು. ಜೊತೆಗೆ, ಬಿಜೆಪಿ ಅಧ್ಯಕ್ಷ ಕೊಲೆ ಆರೋಪ ಹೊತ್ತಿದ್ದಾರೆ ಎಂದು ಅಮಿತ್ ಶಾ ವಿರುದ್ಧ ಕಿಡಿಕಾರಿದರು.

ಆರ್​ಎಸ್​​ಎಸ್​​ ಎಲ್ಲ ಸಂವಿಧಾನಿಕ ಸಂಸ್ಥೆಗಳಲ್ಲಿ ದಾರಿ ಹುಡುಕಿಕೊಳ್ಳುತ್ತಿದೆ ಎಂದು ರಾಹುಲ್, ಇಂಥದ್ದು ಪಾಕಿಸ್ತಾನದಲ್ಲಿ ಅಥವಾ ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ಸಂಭವಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇಂಥ ಘಟನೆಗಳು ಪಾಕಿಸ್ತಾನದ​ನಲ್ಲಿ ಮತ್ತು ಸರ್ವಾಧಿಕಾರಿಗಳ ಆಡಳಿತದ ಅವಧಿಯಲ್ಲಿ ನಡೆಯುತ್ತವೆ ಎಂದು ಅವರು ಕಿಡಿಕಾರಿದರು.

ಹರಿಯಾಣದಲ್ಲಿ 8 ಅಥವಾ 10ನೇ ತರಗತಿ ಉತ್ತೀರ್ಣರಾದವರು ಮಾತ್ರ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ, ಸಂಸದರು, ಶಾಸಕರಿಗೆ ಇಂಥ ಕಾನೂನನ್ನು ಇನ್ನೂ ರೂಪಿಸಿಲ್ಲ ಎಂದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *