ಅಯೋಗ್ಯ ಚಿತ್ರದ ಟೈಟಲ್ ವಿವಾದ ಮುಂದುವರೆದಿದೆ

ಅಯೋಗ್ಯ ಚಿತ್ರದ ಟೈಟಲ್ ವಿವಾದ ಮುಂದುವರೆದಿದೆ. ಆಯೋಗ್ಯ ಚಿತ್ರದ ಟ್ಯಾಗ್ ಲೈನ್ ಗ್ರಾಮ ಪಂಚಾಯಿತಿ ಸದಸ್ಯ ಎಂದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಇಂದು ಫಿಲಂ ಚೇಂಬರ್ ಮುಂದೆ ಜಮಾಯಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಚಿತ್ರದ ಟೈಟಲ್ ಬದಲಿಸುವಂತೆ ಒತ್ತಾಯಿಸಿದ್ರು. ಈ ಮಧ್ಯೆ, ಚಿತ್ರದ ಟೈಟಲ್ ವಿವಾದದ ಹಿನ್ನೆಲೆಯಲ್ಲಿ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ್ರು, ನಿನ್ನೆ ಗ್ರಾಮ ಪಂಚಾಯಿತಿ ಸದಸ್ಯರಾದ ರೇವತಿ, ಲಕ್ಷ್ಮೀ ಗೌಡರಿಂದ ದೂರು ಬಂದಿದ್ದು, ಈ ಕುರಿತಾಗಿ ಚರ್ಚೆ ಮಾಡಿರುವುದಾಗಿ ತಿಳಿಸಿದ್ರು. ಇನ್ನು ಕಲಾವಿದರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಜೊತೆಯಲ್ಲೂ ಮಾತನಾಡಿ ಟಾಗ್ ಲೈನ್ ತೆಗೆಯುವಂತೆ ನಿರ್ಧರಿಸಲಾಗಿದೆ. ಕೇವಲ ಅಯೋಗ್ಯ ಅನ್ನೋ ಟೈಟಲ್ ಮಾತ್ರ ಇಟ್ಟಿದ್ದು ಶೀರ್ಷಿಕೆ ಅಡಿ ಇದ್ದ ಗ್ರಾಮ ಪಂಚಾಯಿತಿ ಸದಸ್ಯ ಅನ್ನೋ ಅಡಿ ಬರಹ ಬದಲಾವಣೆ ಮಾಡಲಾಗಿದೆ ಎಂದ್ರು…

0

Leave a Reply

Your email address will not be published. Required fields are marked *