ಯುಪಿಯಲ್ಲಿ ಮತ್ತೆ ತಿರಂಗಾ ಯಾತ್ರೆ

ಉತ್ತರ ಪ್ರದೇಶ: ಕಾಸ್​​ಗಂಜ್​ನಲ್ಲಿ ಹಿಂಸಾಚಾರ ನಡೆದು ಪರಿಸ್ಥಿತಿ ಸಹಜ ಸ್ಥಿತಿಗೆ ಮರುಕಳಿಸುತ್ತಿರುವಾಗಲೇ ಮತ್ತೆ ತಿರಂಗಾ ಯಾತ್ರೆ ಮೊಳಗಿದೆ. ಕಾಸ್​ಗಂಜ್​ನ ಹಿಂಸಾಚಾರದಲ್ಲಿ ಚಂದನ್​ ಗುಪ್ತಾ ಹತ್ಯೆ ಖಂಡಿಸಿ ಆಗ್ರಾ ಹಾಗೂ ಫಿರೋಜಾಬಾದ್​​ನಲ್ಲಿ ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತರು ಬೈಕ್​ ರ್ಯಾಲಿ ನಡೆಸಿದ್ದಾರೆ. 40 ಬ್ಲಾಕ್​ಗಳಲ್ಲಿ ಈ ರ್ಯಾಲಿ ಸಾಗಲಿದ್ದು, ಮತ್ತೆ ಯಾವುದೇ ಹಿಂಸಾಚಾರ ಮರುಕಳಿಸದಂತೆ ನೋಡಿಕೊಳ್ಳಲು ಅತಿ ಹೆಚ್ಚು ಪೊಲೀಸ್​ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಲೀಗಢ್​, ಬರೇಲಿಯಲ್ಲಿಯೂ ತಿರಂಗಾ ಯಾತ್ರೆ ನಡೆಸಲಿದ್ದೇವೆ ಎಂದು ವಿಎಚ್​ಪಿ ನಾಯಕ ಸುನೀಲ್​ ಪರಾಶರ್​ ಹೇಳಿದ್ದಾರೆ. ಕಳೆದ ಜನವರಿ 26 ರಂದು ಕಾಸ್​ಗಂಜ್​ನಲ್ಲಿ ನಡೆದ ತಿರಂಗಾ ರ್ಯಾಲಿಯಲ್ಲಿ ಮುಸ್ಲಿಂ ಮತ್ತು ಹಿಂದೂ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ.

0

Leave a Reply

Your email address will not be published. Required fields are marked *