ಚೀನಾದಿಂದ ಭವಿಷ್ಯದಲ್ಲಿ ಬೆದರಿಕ: ಸೇನೆಯ ಉಪ ಮುಖ್ಯಸ್ಥರಿಂದ ಭವಿಷ್ಯ

ನವದೆಹಲಿ: ಚೀನಾ ಭವಿಷ್ಯದಲ್ಲಿ ಭಾರತಕ್ಕೆ ದೊಡ್ಡ ಬೆದರಿಕೆಯೊಡ್ಡಲಿದೆ ಎಂದು ಸೇನೆಯ ಉಪ ಮುಖ್ಯಸ್ಥ ಲೆ. ಜನರಲ್ ಸರತ್ ಚಂದ್ ಭವಿಷ್ಯ ನುಡಿದಿದ್ದಾರೆ. ಭಾರತ ಆರ್ಥಿಕವಾಗಿ ಬಲಿಷ್ಠವಾಗುತ್ತಿದೆ. ಆದ್ದರಿಂದ ಭದ್ರತೆಯ ಅಗತ್ಯ ಕೂಡ ಹೆಚ್ಚಾಗಿದೆ. ಜಗತ್ತು ದೇಶಗಳನ್ನು ಆರ್ಥಿಕತೆ ಮತ್ತು ಸೇನಾ ಬಲಿಷ್ಠತೆಯಿಂದ ಗುರುತಿಸುತ್ತದೆ ಎಂದರು. ಅಲ್ಲದೇ, ಪಾಕಿಸ್ತಾನ ಅತಿ ಸಣ್ಣ ಆರ್ಥಿಕ ದೇಶ ವಹಿವಾಟು ಹೊಂದಿರುವ ದೇಶ ಎಂದು ಕೂಡ ಅವರು ಹೇಳಿದರು.ಜೂನ್ 16ರಂದು ಚೀನಾ ಸೇನಾ ಪಡೆ ವಿವಾದಿತ ದೋಕಾ ಲಾ ಪ್ರಸ್ಥಭೂಮಿಯಲ್ಲಿ ರಸ್ತೆ ನಿರ್ಮಿಸುವ ಮೂಲಕ ಭಾರತದ ವಿರುದ್ಧ ತಕರಾರು ತೆಗೆದಿತ್ತು. ಆದರೆ, ಇದಕ್ಕೆ ಭಾರತ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಇನ್ನೂ ಈ ವಿವಾದ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ.

0

Leave a Reply

Your email address will not be published. Required fields are marked *