ಸುಂಕದಕಟ್ಟೆ ಪ್ರದೇಶದಲ್ಲಿತ್ತು ಸಾವಿರಾರು ಕೋಟಿ ಸರ್ಕಾರಿ ಭೂಮಿ..!

ಬೆಂಗಳೂರು: ಬೆಂಗಳೂರು ಜಿಲ್ಲಾಡಳಿತ ಆಗಿಂದ್ದಾಗೆ ನಗರದ 5 ತಾಲೂಕುಗಳಲ್ಲಿ ಸರ್ಕಾರಿ ಭೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಈವರೆಗೆ ಸಾವಿರಾರು ಎಕರೆ ಭೂಮಿಯನ್ನು ತನ್ನ ವಶಕ್ಕೆ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದೇ ಬಾರಿಗೆ ಗಿಡದ ಕೋನೇನಹಳ್ಳಿ, ಹೇರೋಹಳ್ಳಿ ಹಾಗೂ ಶ್ರೀಗಂಧಕಾವಲ್ ಗ್ರಾಮಕ್ಕೆ ಸೇರಿದ ಬರೋಬ್ಬರಿ 354 ಎಕರೆ ಭೂಮಿಯನ್ನು ತನ್ನ ಸ್ವಾಧೀನಕ್ಕೆ ಪಡೆದಿದ್ದು ಇದೇ ಪ್ರಥಮ ಬಾರಿಗೆ ಅನ್ನಬಹುದು. ಚಮನ್ ಲಾಲ್ ಬಜಾಜ್ ಸೇವಾ ಟ್ರಸ್ಟ್ ಸ್ವಾಧೀನದಲ್ಲಿದ್ದ ಸರ್ಕಾರಕ್ಕೆ ಸೇರಿದ 375 ಎಕರೆ ಪೈಕಿ 354 ಎಕರೆ ಭೂಮಿಯನ್ನು ಬೆಂಗಳೂರು ಜಿಲ್ಲಾಡಳಿತ ಗುರುವಾರ ಕಾರ್ಯಾಚರಣೆ ನಡೆಸಿ ತನ್ನ ಸ್ವಾಧೀನಕ್ಕೆ ಪಡೆದಿದೆ. ಇದರ ಇಂದಿನ ಮಾರುಕಟ್ಟೆ ಮೌಲ್ಯ ಬರೋಬ್ಬರಿ 1,750 ಕೋಟಿ ರೂಪಾಯಿಯಿಂದ 2 ಸಾವಿರ ಕೋಟಿ ರೂಪಾಯಿ. ಆ ಭೂಮಿ ಪೈಕಿ 39 ಎಕರೆಯಲ್ಲಿ ಹಲವರು ಮನೆ ಕಟ್ಟಿದ್ದು ಅವುಗಳನ್ನು ಒಡೆಯದೆ ಸರ್ಕಾರದ ಸ್ವಾಧೀನಕ್ಕೆ ಪಡೆಯುತ್ತೇವೆ. ಹಾಗೂ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ನೀಡುವುದಾಗಿ ಜಿಲ್ಲಾಧಿಕಾರಿ ಶಂಕರ್ ತಿಳಿಸಿದ್ದಾರೆ.

ಸ್ವಾತಂತ್ರ್ಯಪೂರ್ವದಲ್ಲಿ ಚಮನ್ ಲಾಲ್ ಬಜಾಜ್ ಸೇವಾ ಟ್ರಸ್ಟ್ ಒಟ್ಟು 374 ಎಕರೆಯಷ್ಟು ಭೂಮಿಯನ್ನು ಖರೀದಿಸಿತ್ತು. ಯಾವಾಗ 1974ರಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ಬಂತೋ ಜಮೀನು ಹೊಂದಿರೋರು ತಮ್ಮಲ್ಲಿದ್ದ ಹೆಚ್ಚುವರಿ ಜಮೀನನ್ನು ಘೋಷಿಸಿಕೊಳ್ಳಬೇಕಿತ್ತು. ಇದೇ ರೀತಿ ಬಜಾಜ್ ಸೇವಾ ಟ್ರಸ್ಟ್ ಕೂಡ ಅರ್ಜಿ ಹಾಕಿತ್ತು. 2010ರಲ್ಲಿ ಭೂ ನ್ಯಾಯಮಂಡಳಿ ಮೊದಲ ಆದೇಶ ನೀಡಿ ಚಮನ್ ಲಾಲ್ ಟ್ರಸ್ಟ್ ಗೆ 108 ಎಕರೆ ಜಮೀನು ಹೊಂದಲು ಮಾತ್ರ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ನವರು ಹೈಕೋರ್ಟ್ ಮೊರೆ ಹೋದಾಗ ಮತ್ತೆ ಮರು ಪರಿಶೀಲನೆಗೆ ಭೂ ನ್ಯಾಯಮಂಡಳಿ ಇತ್ಯರ್ಥ ಪಡಿಸಲು ನ್ಯಾಯಾಲಯ ತಿಳಿಸುತ್ತೆ. 2015ರಲ್ಲಿ ನ್ಯಾಯಮಂಡಳಿ ತನ್ನ ಹಿಂದಿನ ಆದೇಶವನ್ನೇ ಎತ್ತಿ ಹಿಡಿಯುತ್ತೆ. ಅಂತಿಮವಾಗಿ ಕಳೆದ ನವೆಂಬರ್​​ನಲ್ಲಿ ಬೆಂಗಳೂರು ಉತ್ತರ ಭೂನ್ಯಾಯಮಂಡಳಿ ಕೂಲಂಕುಷ ವಿಚಾರಣೆ ನಡೆಸಿ ಒಂದು ಟ್ರಸ್ಟ್ 20 ಯೂನಿಟ್ ನಂತೆ ಎ- ದರ್ಜೆಯ ಭೂಮಿಯಿರುವ ಕಾರಣ ಟ್ರಸ್ಟ್ ಗೆ 20 ಎಕರೆ ಮಂಜೂರು ಮಾಡಿ ಉಳಿದ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುವಂತೆ ಆದೇಶ ನೀಡುತ್ತೆ. ಬಿಬಿಎಂಪಿ ವ್ಯಾಪ್ತಿಯಲ್ಲಿರೋ ಈ ಪ್ರೈಮ್ ಪ್ರಾಪರ್ಟಿಯನ್ನು ಜಿಲ್ಲಾಡಳಿತ ತನ್ನ ವಶಕ್ಕೇನೋ ಪಡೆದಿದೆ. ಆದರೆ ಇನ್ಮುಂದೆ ಸಾರ್ವಜನಿಕ ಅಗತ್ಯಗಳಿಗೆ ಬಳಸಿಕೊಳ್ಳಲು ಭೂ ಮಾಫಿಯಾದವರಿಂದ ರಕ್ಷಿಸಿಕೊಳ್ಳೋದು ಅಷ್ಟೆ ಅಗತ್ಯವಾಗಿದೆ.

ಮಂಜುನಾಥ್ ಹೊಸಹಳ್ಳಿ ಸುದ್ದಿಟಿವಿ, ಬೆಂಗಳೂರು.

0

Leave a Reply

Your email address will not be published. Required fields are marked *