ಇಸ್ಲಾಂ ಧರ್ಮವನ್ನು ಜಗತ್ತಿನಲ್ಲಿ ಇಲ್ಲವಾಗಿಸಬೇಕು ಎನ್ನುವುದು ಜೀವನ ಧರ್ಮವೇ?: ಪ್ರಕಾಶ್ ರೈ ಟ್ವೀಟ್

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಟ್ವೀಟ್ ವಾರ್ ಮುಂದುವರೆಸಿದ ಪ್ರಕಾಶ್ ರೈ, ಈ ಸಚಿವರು ಇಸ್ಲಾಂ ಧರ್ಮವನ್ನು ಜಗತ್ತಿನಿಂದ ಇಲ್ಲವಾಗಿಸಬೇಕು ಎನ್ನುತ್ತಾರೆ. ಹಿಂದುತ್ವದ ಕುರಿತು ಅವರು ಮಾತನಾಡುವುದು ಹೇಗೆ? ಇದನ್ನು ಜೀವನ ಪದ್ಧತಿ ಎನ್ನುವುದು ಹೇಗೆ ಎಂದು ಟ್ವೀಟ್ ಮಾಡಿದ್ದಾರೆ.
#justasking ಹ್ಯಾಷ್​ಟ್ಯಾಗ್​ನಡಿ ಟ್ವೀಟ್ ಮಾಡಿರುವ ಅವರು, ಹಿಂದೂ ಎನ್ನುವುದು ಜೀವನ ಪದ್ಧತಿ ಎನ್ನುವುದರ ವ್ಯಾಖ್ಯಾನವನ್ನು ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರಿಗೆ ನೆನಪಿಸಿದ್ದಾರೆ. ಇಂದಿನ ಎರಡನೇ ಟ್ವೀಟ್​​ನಲ್ಲಿ, ಅನಂತ್ ಕುಮಾರ್ ಹೆಗಡೆಯವರು, ಇಸ್ಲಾಂ ಧರ್ಮದ ವಿರುದ್ಧ ಮಾತನಾಡಿರುವ 45 ಸೆಕೆಂಡ್​ಗಳ ವೀಡಿಯೋವನ್ನು ಕೂಡ ಟ್ವೀಟ್ ಮಾಡಿದ್ದಾರೆ.

 

ನಮ್ಮ ಹಿಂದುತ್ವವನ್ನು ವಿರೂಪಗೊಳಿಸಲು ಈ ಮಹಾಶಯನಿಗೆ (ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ) ಭಾರತೀಯರಾದ ನಾವು ಅವಕಾಶ ಕೊಡಬೇಕೆ? ಎಂದು ಟ್ವೀಟ್ ಮೂಲಕ ಪ್ರಕಾಶ್ ರೈ ಮತ್ತೊಮ್ಮೆ ಪ್ರತ್ಯುತ್ತರ ಕೊಟ್ಟಿದ್ದಾರೆ. ತಮ್ಮ ಟ್ವೀಟ್​ಗೆ ಬಂದ ಭಾರೀ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ಭಯೋತ್ಪಾದನೆಯನ್ನು ಮೂಲೋಚ್ಛಾಟನೆ ಮಾಡಲು ಜಗತ್ತಿನಿಂದ ಇಸ್ಲಾಂ ಧರ್ಮವನ್ನು ಇಲ್ಲವಾಗಿಸಬೇಕು ಎಂದು ಕರೆ ನೀಡಿದ್ದ ಅನಂತಕುಮಾರ್ ಹೆಗಡೆಯವರ ಮಾತನ್ನು ಉಲ್ಲೇಖಿಸಿರುವ ಅವರು, ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇದು ಅವರ ಉದ್ದೇಶ ಮತ್ತು ನಾಚಿಕೆಗೆಟ್ಟ ರಾಜಕಾರಣವನ್ನು ಪ್ರಶ್ನಿಸುವ ಸಮಯವಲ್ಲವೇ? ಸುಮ್ಮನೇ ಕೇಳುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ನನ್ನ ಈ ಹಿಂದಿನ ಎರಡು ಟ್ವೀಟ್​ಗಳ ಕುರಿತ ಚರ್ಚೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಹಿಂದುತ್ವ ಎಂಬುದು ಧರ್ಮವಲ್ಲ… ಆದರೆ, ಅದು ಜೀವನ ಪದ್ಧತಿ ಎಂಬುದು ಎಲ್ಲರಿಗೂ ಗೊತ್ತು. ಅದು ನಿಮಗೂ ಗೊತ್ತು. ನನಗೂ ಗೊತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ. ಅನಂತ ಕುಮಾರ ಹೆಗಡೆಯವರು ಕೂಡ ಹಿಂದೂಧರ್ಮವನ್ನು ಜೀವನ ಪದ್ಧತಿ ಎಂದು ನಂಬುತ್ತಾರೆಯೇ? ಜಾತ್ಯತೀತ ದೇಶದಲ್ಲಿ ಅವರ ಅಜೆಂಡಾಗಳು ಏನು ಎಂಬುದನ್ನು ಓದುವುದಿಲ್ಲವೇ? ಇದು ಅವರ ಉದ್ದೇಶ ಮತ್ತು ನಾಚಿಕೆಗೆಟ್ಟ ರಾಜಕಾರಣವನ್ನು ಪ್ರಶ್ನಿಸುವ ಸಮಯವಲ್ಲವೇ? ಎಂದು ಟ್ವೀಟ್ ಮಾಡಿದ್ದಾರೆ.

0

Leave a Reply

Your email address will not be published. Required fields are marked *