ಈ ಒಂದು ಹಣ್ಣು ಸಾಕು ಅನೇಕ ರೋಗಗಳನ್ನು ಗುಣಪಡಿಸಲು

ತುಂಬಾ ಹಳೆಯ ಕಾಲದಿಂದಲೂ ಬಳಕೆ ಮಾಡುತ್ತಿರುವ ಹಣ್ಣುಗಳಲ್ಲಿ ಖರ್ಜೂರವು ಒಂದಾಗಿದೆ. ಇದನ್ನು ಮಧ್ಯದ ಪೂರ್ವ ರಾಷ್ಟ್ರಗಳಲ್ಲಿ ಬಹಳ ಕಾಲದಿಂದಲೂ ಪ್ರಧಾನ ಆಹಾರವಾಗಿ ಬಳಕೆ ಮಾಡುತ್ತಿದ್ದರು. ಅವುಗಳನ್ನು ನಾವು ತಾಜಾ ಇದ್ದಾಗ ತಿನ್ನಬಹುದು ಅಥವಾ ಒಣಗಿಸಿ ತಿನ್ನಬಹುದು. ಈ ಹಣ್ಣುಗಳು ಸಿಲಿಂಡರ್​​ ಆಕಾರದಲ್ಲಿದ್ದು 3 ರಿಂದ 7 ಸೆಂ.ಮೀ ಉದ್ದವಾಗಿ ಅಂಡಾಕಾರದಲ್ಲಿರುತ್ತವೆ. ಬಲಿಯದ ಹಣ್ಣುಗಳು ಪ್ರಕಾಶಮಾನವಾದ ಹಳದಿ ಅಥವಾ ಕೆಂಪು ಬಣ್ಣದಲ್ಲಿರುತ್ತವೆ ಹಾಗೂ ಹಣ್ಣಾದಾಗ ಕಂದು ಬಣ್ಣದಲ್ಲಿರುತ್ತವೆ. ಈ ಹಣ್ಣುಗಳಲ್ಲಿರುವ ಸಕ್ಕರೆ ಅಂಶದ ಆಧಾರದ ಮೇಲೆ ಇವುಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಬಹುದು: ಮೃಧು, ಅರೆ-ಶುಷ್ಕ ಮತ್ತು ಒಣಗಿದ ಖರ್ಜೂರಗಳು. ಈ ಎಲ್ಲಾ ಪ್ರಭೇದಗಳು ಒಂದೇ ರೀತಿಯಾಗಿರುತ್ತವೆ ಹಾಗೂ ಸ್ವಲ್ಪ ಬದಲಾದ ರುಚಿ ಮತ್ತು ಗಾತ್ರವನ್ನು ಹೊಂದಿರುತ್ತವೆ. ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣುಗಳಲ್ಲಿ ಖರ್ಜೂರವು ಒಂದಾಗಿದೆ. ಖರ್ಜೂರದ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.

1. ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ:

ಖರ್ಜೂರವು ಜಠರದ ಕರುಳಿನ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಫೈಬರ್​​​ಗಳನ್ನು ಹೊಂದಿರುತ್ತವೆ, ಹೀಗಾಗಿ ಕರುಳಿನ ಚಲನೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ.

2. ಹೃದಯಕ್ಕೆ ಒಳ್ಳೆಯದು:

ಖರ್ಜೂರಗಳಲ್ಲಿನ ಫೈಬರ್ ಅಂಶವು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

3. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:

ಮೆಗ್ನೀಸಿಯಮ್ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವಲ್ಲಿಯೂ ಸಹ ಹೆಸರುವಾಸಿಯಾಗಿದೆ. ಅಲ್ಲದೆ, ಖರ್ಜೂರವು ಹೆಚ್ಚು ಪೊಟ್ಯಾಸಿಯಮ್​​ ಹೊಂದಿದ್ದು ಇದು ಹೃದಯದ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

4. ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ:

ಅಮೇರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್​​ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿದಿನಕ್ಕೆ 100 ಮಿಲಿ ಗ್ರಾಂನಷ್ಟು ಮೆಗ್ನೀಷಿಯಂ ಹೊಂದುವುದರಿಂದ ಶೇ.9%ರಷ್ಟು ಪಾರ್ಶ್ವವಾಯು ಸಂಭವಿಸುವ ಅಪಾಯ ಕಡಿಮೆಯಾಗುತ್ತದೆ.

5. ಕೂದಲಿಗೆ ಒಳ್ಳೆಯದು:
ಆರೋಗ್ಯಕರ ಕೂದಲಿಗೆ ವಿಟಮಿನ್ B5 ಒಂದು ಅತ್ಯಗತ್ಯವಾದ ಅಂಶವಾಗಿದೆ. ವಿಟಮಿನ್ B5 ಯ ಕೊರತೆಯು ಕೂದಲು ಉದುರುವುದಕ್ಕೆ ಕಾರಣವಾಗಬಹುದು, ಕೂದಲನ್ನು ಸುಲಭವಾಗಿ ಬಿರುಕುಗೊಳಿಸಬಹುದು ಮತ್ತು ಕೂದಲಿನ ತುದಿಗಳ ಸೀಳುವಿಕೆಗೆ ಕಾರಣವಾಗುತ್ತದೆ.

6. ಚರ್ಮಕ್ಕೆ ಒಳ್ಳೆಯದು:

ಕೆಂಪು ಖರ್ಜೂರದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಗಮಗೊಳಿಸುತ್ತದೆ ಮತ್ತು ಚರ್ಮವನ್ನು ನವಿರಾಗಿ ಹಾಗೂ ಮೃದುಗೊಳಿಸುವಲ್ಲಿ ನೆರವಾಗುತ್ತದೆ. ಖರ್ಜೂರದಲ್ಲಿ ವಿಟಮಿನ್ B5 ಸಹ ಇರುವುದರಿಂದ ಇದು ಚರ್ಮದ ಮೇಲಿನ ಗುರುತುಗಳನ್ನು ಹೋಗಿಸಲು ಪ್ರಯೋಜನಕಾರಿಯಾಗಿದೆ.

 

 

0

Leave a Reply

Your email address will not be published. Required fields are marked *