ಹ್ಯಾಟ್ರಿಕ್​ ಕಾಂಬಿನೇಷನ್​ ಆಗಲಿದೆ ಈ ಚಿತ್ರ

ಮರ್ಸೆಲ್​ ಚಿತ್ರ ಈ ವರ್ಷ ವಿಜಯ್​ಗೆ ಸೂಪರ್​ ಸಕ್ಸಸ್ ತಂದು ಕೊಟ್ಟಿತು. ಇನ್ನು ವಿಜಯ್​ ಮುಂದಿನ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು, ವಿಜಯ್​ ನಟನೆಯ ಹೊಸ ಚಿತ್ರಕ್ಕೆ ಈಗಾಗಲೇ ವಿಜಯ್​ 62 ಎಂದು ಹೆಸರಿಡಲಾಗಿದೆ. ಆದರೆ ಇದು ಜಸ್ಟ್​ ವರ್ಕಿಂಗ್​ ಟೈಟಲ್​ ಆಗಿದ್ದು ಮುಂದಿನ ದಿನಗಳಲ್ಲಿ ಈ ಟೈಟಲ್ ಬದಲಾಗಲಿದೆ. ಈ ಚಿತ್ರವನ್ನು ಘಜಿನಿ ಚಿತ್ರದ ನಿರ್ದೇಶಕರಾದ ಎ. ಆರ್​ ಮುರುಗದಾಸ್​ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ವಿಜಯ್​ ಮತ್ತು ಎ. ಆರ್​ ಮುರುಗದಾಸ್​ ಕಾಂಬಿನೇಷನ್​ ಇದೇ ಮೊದಲೇನಲ್ಲ. ಈ ಜೋಡಿ 2012ರಲ್ಲಿ ತುಪಾಕಿ ಎಂಬ ಆಕ್ಷನ್​ ಥ್ರಿಲ್ಲರ್​ ಚಿತ್ರ ಮಾಡಿದ್ದರು. ಇನ್ನು ತುಪಾಕಿ ಚಿತ್ರದ ಮತ್ತೊಂದು ವಿಶೇಷತೆಯೇನೆಂದರೆ ಬಹು ಬೇಗ ನೂರು ಕೋಟಿ ಕ್ಲಬ್​ಗೆ ಸೇರಿದ ಚಿತ್ರವಾಗಿತ್ತು. ಇದಾದ ನಂತರ ಈ ಜೋಡಿ 2014ರಲ್ಲಿ ಕತ್ತಿ ಚಿತ್ರದಲ್ಲಿ ಒಟ್ಟಾಗಿದ್ದರು. ಕತ್ತಿ ಚಿತ್ರವೂ ಸಹ ಬಾಕ್ಸ್ ಆಫೀಸಿನಲ್ಲಿ ಧೂಳಿಪಟ ಮಾಡಿತ್ತು.

ಈ ಎರಡೂ ಚಿತ್ರಗಳ ಸೂಪರ್​ ಸಕ್ಸ್​​​ಸ್​​​ ನಂತರ ಈ ಜೋಡಿ ಮತ್ತೆ ಒಟ್ಟಾಗಿ ಸಿನಿಮಾ ಮಾಡುವ ಯೋಜನೆಯಲ್ಲಿದ್ದಾರೆ. ಈಗಾಗಲೇ ಎ. ಆರ್​ ಮುರುಗದಾಸ್​ ಇಳಯ ದಳಪತಿಯನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ. ಇನ್ನು ಇಡೀ ತಂಡ ಚಿತ್ರದ ಪ್ರಿ ಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್​62 ಚಿತ್ರವನ್ನು ಸನ್ ಪಿಕ್ಚರ್ಸ್​ನ ಕಲಾನಿಧಿ ಮಾರನ್​ ನಿರ್ಮಾಣ ಮಾಡಲಿದ್ದು, ಮುಂದಿನ ವರ್ಷ ಆರಂಭದಲ್ಲಿ ಈ ಚಿತ್ರ ಸೆಟ್ಟೇರಲಿದೆ. 2018ರ ದೀಪಾವಳಿಗೆ ಇವರಿಬ್ಬರ ಕಾಂಬಿನೇಷನ್ನಿನ ಮೂರನೇ ಸಿನಿಮಾ ತೆರೆಗೆ ಬರಲಿದೆ.

ಹರೀಶ್​.ಕೆ.ಗೌಡ. ಫಿಲ್ಮ್​ ಬ್ಯೂರೋ, ಸುದ್ದಿ ಟಿವಿ.

0

Leave a Reply

Your email address will not be published. Required fields are marked *